ದಕ್ಷಿಣ ಕನ್ನಡ ಜಿಲ್ಲಾ ಐಕ್ಯವೇದಿಕೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ಹನೀಫ್ ಬಗ್ಗುಮೂಲೆ, ಪ್ರ ಕಾರ್ಯದರ್ಶಿ ಶಾದತ್ ರಿಜ್ವಾನ್, ಖಜಾಂಜಿ ಇಕ್ಬಾಲ್‌


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಐಕ್ಯವೇದಿಕೆಯ ಸಭೆಯು ಉಳ್ಳಾಲದ ಮಾಸ್ತಿಕಟ್ಟೆಯ ಸಭಾಭವನದಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ . ಅಧ್ಯಕ್ಷರಾಗಿ ಹನೀಫ್ ಬಗ್ಗುಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ಶಾದತ್ ರಿಜ್ವಾನ್ ಕಾಟಿಪಳ್ಳ, ಕೋಶಾಧಿಕಾರಿಯಾಗಿ ಮೊಹಮ್ಮದ್ ಇಕ್ಬಾಲ್ ಬಿಕರ್ನಕಟ್ಟೆ ಆಯ್ಕೆಯಾದರು.


ಉಪಾಧ್ಯಕ್ಷರಾಗಿ ಸಾದಿಕ್ ಉಳ್ಳಾಲ ಹಾಗೂ ನೌಶಾದ್ ಹಾಜಿ ಬೊಳ್ವಾರ್ , ಜಂಟಿ ಕಾರ್ಯದರ್ಶಿಗಳಾಗಿ ಶಬೀರ್ ಕೃಷ್ಣಾಪುರ ಮತ್ತು ಇಂಬ್ರಾಜ್ ಬಜ್ಪೆ,ಲೆಕ್ಕ ಪರಿಶೋಧಕರಾಗಿ ಸಿದ್ದಿಕ್ ಸೂರ್ಯ,ಸಂಘಟನಾ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಕಾಜೂರ್, ಸಮೀರ್ ಕೆ.ಎಚ್., ಇಸ್ಮಾಯಿಲ್ ಉಳ್ಳಾಲ, ಮೊಹಮ್ಮದ್ ಯೂಸುಫ್ ಹಾಗೂ ಉಮರ್ ಯು.ಎಸ್. ಆಯ್ಕೆಯಾದರು.‌


ಗೌರವ ಸಲಹೆಗಾರರಾಗಿ ಲತೀಫ್ ನೇರ್ಲಕಟ್ಟೆ, ಹಾರೂನ್ ರಶೀದ್ ಅಗ್ನಾಡಿ, ಯಾಕೂಬ್ ಗುರುಪುರ ಹಾಗೂ ಶಾಹುಲ್ ಹಮೀದ್‌ರವರನ್ನು ಆಯ್ಕೆ ಮಾಡಲಾಯಿತು.
ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಜಿಲ್ಲೆಯಾದ್ಯಂತ ಸಾಮಾಜಿಕ ಸೇವೆ, ಸಹಕಾರ ಮತ್ತು ಜನಪರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಪದಾಽಕಾರಿಗಳು ಸಂಕಲ್ಪ ವ್ಯಕ್ತಪಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ನೂತನ ಪದಾಽಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

LEAVE A REPLY

Please enter your comment!
Please enter your name here