






ಪೇರಲ್ತಡ್ಕ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಶಾಲೆಯಲ್ಲಿ 2026 – 27ನೇ ಸಾಲಿನ ಮಂತ್ರಿ ಮಂಡಲ ರಚನೆ ಚುನಾವಣೆ ಮೂಲಕ ನಡೆಯಿತು.


ಸಾಂಪ್ರದಾಯಿಕ ಮತ ಪೆಟ್ಟಿಗೆಯ ಜೊತೆಗೆ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಈ.ವಿ.ಎಂ ಹಾಗೂ ವಿ.ವಿ ಪ್ಯಾಡ್ ಮಾದರಿಯನ್ನು ಬಳಸಿ ವಿದ್ಯಾರ್ಥಿಗಳು ಡಿಜಿಟಲ್ ಮತದಾನ ಮಾಡಿದ್ದು ಈ ಚುನಾವಣೆಯು ವಿಶೇಷವಾಗಿತ್ತು. ಮತಗಟ್ಟೆ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿಯಾದ ಜಾನಕಿ ಕೆ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ಪ್ರಜಾಪ್ರಭುತ್ವದ ಮೌಲ್ಯಗಳು, ನಾಯಕತ್ವದ ಗುಣಗಳ ಕುರಿತು ಅರಿವು ಮೂಡಿಸಿದರು. ಚುನಾವಣೆ ಯ ಮಹತ್ವ ಮತ್ತು ಉದ್ದೇಶ ಕುರಿತು ವಿದ್ಯಾರ್ಥಿಗಳಿಗೆ ಹಿರಿಯ ಶಿಕ್ಷಕಿ ಯಶೋದ ಇವರು ತಿಳಿಸಿದರು.




ವಿಜ್ಞಾನ ಶಿಕ್ಷಕ ಬಾಲಕೃಷ್ಣ ಕೆ ಇವರು ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದರು. ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ನಡೆಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕನಾಗಿ ಪೂರ್ಣೇಶ್ ಎಸ್ .ಪಿ (7ನೇ ತರಗತಿ), ಉಪಮುಖ್ಯಮಂತ್ರಿಯಾಗಿ ನುಹಾ ಖದೀಜಾ (8ನೇ ತರಗತಿ), ಶಿಕ್ಷಣ ಮಂತ್ರಿಯಾಗಿ ಶಮ್ನ ಫಾತಿಮ (8ನೇ ತರಗತಿ), ಆರೋಗ್ಯಮಂತ್ರಿಯಾಗಿ ಆಯಿಶತ್ ಶಮ್ನ (8ನೇ ತರಗತಿ), ಆಹಾರ ಮಂತ್ರಿಯಾಗಿ ಶಮ್ನಾ ಆಯಿಶಾ (8ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ರಿಝ್ವಾನ್( 8ನೇ ತರಗತಿ), ರಕ್ಷಣಾ ಮಂತ್ರಿಯಾಗಿ ಶಮೀಶ್ .ಬಿ. ( 6ನೇ ತರಗತಿ), ನೀರಾವರಿ ಮಂತ್ರಿಯಾಗಿ ರಾಫಿಯಾ (8ನೇ ತರಗತಿ), ವಾರ್ತಾ ಮಂತ್ರಿಯಾಗಿ ಮಝಿಲ (8ನೇ ತರಗತಿ ), ಗ್ರಂಥಾಲಯ ಮಂತ್ರಿಯಾಗಿ ಪ್ರಾಧ್ಯಾ ಪಿ .ಕಿ. (7ನೇ ತರಗತಿ), ತೋಟಗಾರಿಕಾ ಮಂತ್ರಿ ಶಶಾಂಕ್ .ಬಿ (7ನೇ ತರಗತಿ), ಸ್ವಚ್ಛತಾ ಮಂತ್ರಿಯಾಗಿ ರಮ್ಯಶ್ರೀ (8ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಆಸಿಯ ಅಮ್ನ ( 8ನೇ ತರಗತಿ), ವಿರೋಧ ಪಕ್ಷದ ನಾಯಕಿ ನಸ್ರೀನ(8ನೇ) ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮಾಜವಿಜ್ಞಾನ ಶಿಕ್ಷಕಿ ಲಕ್ಷ್ಮಿ ದೇವಿ ಬಿ. ಎನ್ ಪ್ರಮಾಣ ವಚನ ಬೋಧಿಸಿ, ಜವಾಬ್ದಾರಿ ಹಂಚಿಕೆ ಮಾಡಿದರು. ಹಾಗೂ ಮಮತಾ ಕೆ ಮತ್ತು ಸುಮಯ್ಯ ಚುನಾವಣಾ ಕಾರ್ಯ ಪಾಲ್ಗೊಂಡರು. ಎಲ್ಲಾ ಶಿಕ್ಷಕರು ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.









