







ಅಧ್ಯಕ್ಷ ಸ್ಥಾನ- 3, ಉಪಾಧ್ಯಕ್ಷ ಸ್ಥಾನ- 1, ಕಾರ್ಯದರ್ಶಿ ಸ್ಥಾನ- 1, ಕೋಶಾಧಿಕಾರಿ ಸ್ಥಾನ- 2, ಜತೆ ಕಾರ್ಯದರ್ಶಿ ಸ್ಥಾನ- 1


ಪುತ್ತೂರು:ಪುತ್ತೂರು ವಕೀಲರ ಸಂಘಕ್ಕೆ ಮುಂದಿನ 2 ವರ್ಷಗಳ ಅವಧಿಗೆ ಹೊಸ ಆಡಳಿತ ಮಂಡಳಿ ರಚನೆಗಾಗಿ ಜು.23ರಂದು ಚುನಾವಣೆ ನಡೆಯಲಿದ್ದು 5 ಸ್ಥಾನಗಳಿಗೆ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಕೆಗೆ ಜು.13 ಕೊನೆಯ ದಿನವಾಗಿತ್ತು.



2026-27ರಿಂದ 2027-28ರ ಸಾಲಿನ 2 ವರ್ಷದ ಅವಧಿಯ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ.ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಕೋಶಾಧಿಕಾರಿ(ಮಹಿಳಾ ಸದಸ್ಯರಿಗೆ ಮೀಸಲಾತಿ) ಹಾಗೂ ಜತೆ ಕಾರ್ಯದರ್ಶಿಯ ತಲಾ 1 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.ನಾಮಪತ್ರ ಸಲ್ಲಿಕೆ ಜು.೬ರಂದು ಆರಂಭಗೊಂಡಿದ್ದು ಜು.13ರಂದು ಸಂಜೆ 4 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು.
5 ಸ್ಥಾನಗಳಿಗೆ 8 ನಾಮಪತ್ರ ಸಲ್ಲಿಕೆ:
ಸಂಘದ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಕೋಶಾಧಿಕಾರಿ ಹಾಗೂ ಜತೆ ಕಾರ್ಯದರ್ಶಿ ಸೇರಿ 5 ಸ್ಥಾನಗಳಿಗೆ ಒಟ್ಟು 8 ನಾಮಪತ್ರ ಸಲ್ಲಿಕೆಯಾಗಿದೆ.ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಕುಮಾರ್ ಕೆ.,ಶ್ರೀಗಿರೀಶ್ ಮಳಿ, ನೂರುದ್ದೀನ್ ಸಾಲ್ಮರರವರು ನಾಮಪತ್ರ ಸಲ್ಲಿಸಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಮಹಾಬಲ ಶೆಟ್ಟಿ ಕೊಮ್ಮಂಡ,ಕಾರ್ಯದರ್ಶಿ ಸ್ಥಾನಕ್ಕೆ ಸ್ವಾತಿ ಜಗನ್ನಾಥ ರೈ, ಕೋಶಾಧಿಕಾರಿ ಸ್ಥಾನಕ್ಕೆ ಭಾರತಿ ಎ. ಮತ್ತು ಮಮತ ಸುವರ್ಣ ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ಉದಯಚಂದ್ರ ಕರಂಬಾರುರವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಪರಿಶೀಲನೆ ಮತ್ತು ಹಿಂಪಡೆಯುವಿಕೆ:
ಜು.16ರಂದು ಬೆಳಿಗ್ಗೆ 10ರಿಂದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನಾಮಪತ್ರ ಹಿಂಪಡೆಯಲು ಜು.18ರಂದು ಕೊನೆಯ ದಿನವಾಗಿದೆ.
ಮತದಾನ ದಿನ ಮತ್ತು ಮತ ಎಣಿಕೆ:
ಜು.23ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದ್ದು ಅದೇ ದಿನ ಸಂಜೆ 4ರಿಂದ ಮತ ಎಣಿಕೆ ನಡೆಯಲಿದೆ.ವಕೀಲ ಎಸ್.ಪ್ರವೀಣ್ ಕುಮಾರ್ ಚುನಾವಣಾಧಿಕಾರಿಯಾಗಿ ಮತ್ತು ವಕೀಲರಾದ ಜಯಾನಂದ ಕೆ. ಹಾಗೂ ಮನೋಹರ್ ಎ.ರವರು ಸಹಾಯಕ ಚುನಾವಣಾಽಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉಪಾಧ್ಯಕ್ಷ,ಕಾರ್ಯದರ್ಶಿ,ಜೊತೆ ಕಾರ್ಯದರ್ಶಿ ಅವಿರೋಧ ಆಯ್ಕೆ ಸಾಧ್ಯತೆ
ಉಪಾಧ್ಯಕ್ಷ,ಕಾರ್ಯದರ್ಶಿ,ಜೊತೆ ಕಾರ್ಯದರ್ಶಿ ಸ್ಥಾನಗಳಿಗೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಈ ಮೂರು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯುವುದು ಖಚಿತವಾಗಿದೆ.ನಾಮಪತ್ರಗಳ ಪರಿಶೀಲನೆ ಮತ್ತು ಹಿಂಪಡೆಯುವಿಕೆ ಪ್ರಕ್ರಿಯೆ ಮುಗಿದ ಬಳಿಕವೇ ಇದು ಸ್ಪಷ್ಟವಾಗಲಿದೆ.ಅಧ್ಯಕ್ಷ ಮತ್ತು ಕೋಶಾಽಕಾರಿ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.










