ರಾಮಕುಂಜ: ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿ ಸುವರ್ಣ ವಿವಾಹ ಸಂಭ್ರಮ ಪ್ರಯುಕ್ತ ಸಹಸ್ರಚಂದ್ರ ದರ್ಶನ, ಭೀಮರಥ ಶಾಂತಿ ಹೋಮ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ. ಸೇಸಪ್ಪ ರೈ-ಪುಷ್ಪಾ ಎಸ್. ರೈ ದಂಪತಿಯ ಸುವರ್ಣ ವಿವಾಹ ಸಂಭ್ರಮ ಪ್ರಯುಕ್ತ ಸಹಸ್ರಚಂದ್ರ ದರ್ಶನ ಶಾಂತಿಹೋಮ, ಭೀಮರಥ ಶಾಂತಿ ಹೋಮ ಜು.13ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು. ಜು.15ರಂದು ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯಲ್ಲಿ ಇವರ ಸುವರ್ಣ ವಿವಾಹ ಸಂಭ್ರಮ ನಡೆಯಲಿದೆ.


ವಿವಾಹ ಸುವರ್ಣ ಸಂಭ್ರಮ ಆಚರಿಸುತ್ತಿರುವ ಕೆ.ಸೇಸಪ್ಪ ರೈ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಹಸ್ರಚಂದ್ರ ದರ್ಶನ ಶಾಂತಿ ಹೋಮ ಹಾಗೂ ಪುಷ್ಪಾ ಎಸ್.ರೈ ಅವರಿಗೆ 70ವರ್ಷ ಸಂದ ದ್ಯೋತಕವಾಗಿ ಭೀಮರಥ ಶಾಂತಿ ಹೋಮ ನಡೆಯಿತು. ಕಾರಿಂಜ ವೆಂಕಟ್ರಮಣ ಮುಚ್ಚಿಣ್ಣಾಯ ಹಾಗೂ ಶ್ರೀನಿಧಿ ಮುಚ್ಚಿಣ್ಣಾಯರ ನೇತೃತ್ವದಲ್ಲಿ 15 ಮಂದಿ ಪುರೋಹಿತರ ತಂಡದಿಂದ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಆಗಮಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕೆ.ಸೇಸಪ್ಪ ರೈ ಅವರು ನಮ್ಮ ಶ್ರೀ ರಾಮಕುಂಜೇಶ್ವರ ಸಂಸ್ಥೆಯಲ್ಲಿಯೇ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಸಂಸ್ಥೆಯ ಬೆಳವಣಿಗೆಗೆ ಕಟಿಬದ್ಧರಾಗಿ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಚಿಕ್ಕಮಗಳೂರಿನ ನಮ್ಮ ಸಂಸ್ಥೆಯ ಬೆಳವಣಿಗೆಗೂ ದುಡಿದಿದ್ದಾರೆ. ಅವರದ್ದು ಸಮರ್ಪಣೆಯ ಬದುಕು. ಈಗ ಜೀವನದ ಪ್ರಮುಖ ಘಟ್ಟ ತಲುಪಿದ್ದಾರೆ. ದೇವರು ಅವರಿಗೆ ಇನ್ನಷ್ಟೂ ಸೇವೆ ಮಾಡಲು ಶಕ್ತಿ, ಆಯಸ್ಸು ಕರುಣಿಸಲಿ ಎಂದರು. ಕೆ.ಸೇಸಪ್ಪ ರೈ ಹಾಗೂ ಪುಷ್ಪಾ ಎಸ್.ರೈ ದಂಪತಿ ಸ್ವಾಮೀಜಿಗೆ ತುಳಸಿ ಮಾಲಾರ್ಪಣೆ ಮಾಡಿ ಫಲತಾಂಬೂಲ ನೀಡಿ ಗೌರವಿಸಿದರು.


ಮಂಗಳೂರಿನ ವಿನೋದಾಅನಂತರಾಮ ರಾವ್, ಲಕ್ಷ್ಮೀನಾರಾಯಣ ಧರ್ಮಸ್ಥಳ, ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ಮಾಲತಿಕೇಶವ, ನಿವೃತ್ತ ತಹಶೀಲ್ದಾರ್ ಮೋಹನ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಸಂಚಾಲಕ ಟಿ.ನಾರಾಯಣ ಭಟ್, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್, ನಿವೃತ್ತ ಪ್ರಾಂಶುಪಾಲ ಸತೀಶ್ ಭಟ್, ನಿವೃತ್ತ ಉಪನ್ಯಾಸಕರಾದ ಮಾಧವ ಆಚಾರ್ ಇಜ್ಜಾವು, ಸದಾಶಿವ ಭಟ್, ಗಣರಾಜ್ ಕುಂಬ್ಳೆ, ವಸಂತರಾವ್, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಪ್ರಮುಖರಾದ ಮಹೇಂದ್ರ ವರ್ಮ, ವೆಂಕಟ್ರಮಣ ಪಾಂಗಣ್ಣಾಯ, ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ, ಅನಂತ ಕೆದುಂಬಾಡಿ, ಹರೀಶ್ ತೋಟ, ನಾಗರಾಜ್ ಭಟ್ ತೋಟ, ಪ್ರಶಾಂತ್ ರೈ ಜಿ.ಮನವಳಿಕೆ, ಚೆನ್ನಕೇಶವ ಗುತ್ತುಪಾಲು, ಲೋಕನಾಥ ರೈ ಕೇಳ್ಕ, ಸುಬ್ರಹ್ಮಣ್ಯ ಉಪಾಧ್ಯಯ ಕುಪ್ಲಾಜೆ, ಕೃಷ್ಣ ಉಪಾಧ್ಯಾಯ ಕುಪ್ಲಾಜೆ, ರವಿ ಕೆದಿಲಾಯ, ಹರೀಶ್ ಉಪಾಧ್ಯಾಯ ಉಪ್ಪಿನಂಗಡಿ, ಬಾಲಚಂದ್ರ ಮುಚ್ಚಿಂತ್ತಾಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿ ಪುತ್ರಿಯರಾದ ಸುಕೇತಾ ಶೆಟ್ಟಿ, ಡಾ.ಸುಪ್ರೀತಾ ರೈ, ಅಳಿಯಂದಿರಾದ ಮುಂಬೈ ಹೋಟೆಲ್ ರಾಜ್ ಪ್ಯಾಲೇಸ್‌ನ ಮಾಲಕ ಅಶೋಕ್ ಶೆಟ್ಟಿ, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ.ನಿರಂಜನ್ ರೈ ಹಾಗೂ ಮೊಮ್ಮಕ್ಕಳು, ಸಹೋದರ, ಸಹೋದರಿಯರು, ಕುಟುಂಬಸ್ಥರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here