ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಿಟ್ಲ ಶಾಖೆಯಲ್ಲಿ ಗಣಹೋಮ, ಲಕ್ಷ್ಮೀ ಪೂಜೆ

0

ವಿಟ್ಲ: ಕಳೆದ ಹಲವಾರು ವರುಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ವ್ಯವಹಾರ ನಡೆಸುತ್ತಾ ಬಂದಿರುವ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಪುತ್ತೂರು ಎಪಿಎಂಸಿ ರಸ್ತೆಯ ಮಣಾಯಿ ಆರ್ಚ್ ಬಿಲ್ಡಿಂಗ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಿಟ್ಲ ಶಾಖೆಯು ಯಶಸ್ವಿ ೩ನೇ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ ಹಿನ್ನೆಲೆಯಲ್ಲಿ ಜು.13ರಂದು ವಿಟ್ಲದ ಎಂಪೈರ್ ಮಹಲ್ ನಲ್ಲಿರುವ ಶಾಖಾಕಚೇರಿಯಲ್ಲಿ ಅರ್ಚಕರಾದ ಶ್ರೀಧರ ಭಟ್ ಕಬಕರವರ ವೈದಿಕತ್ವದಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಉಪಾಧ್ಯಕ್ಷರಾದ ಯು.ಪಿ. ರಾಮಕೃಷ್ಣ ಗೌಡ,
ನಿರ್ದೇಶಕರು ಮತ್ತು ಸಲಹಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಗೌಡ ಕರ್ಮಲ, ನಿರ್ದೇಶಕರು ಮತ್ತು ಸಲಹಾ ಸಮಿತಿ ಉಪಾಧ್ಯಕ್ಷರು ಜಿನ್ನಪ್ಪ ಗೌಡ ಮಳುವೇಲು, ನಿರ್ದೇಶಕರಾದ ಸತೀಶ್ ಪಾಂಬಾರ್ , ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಮಾಜಿ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ, ಸಾರ್ವಜನಿಕ ಸಂಪರ್ಕಧಿಕಾರಿ ಶ್ರೀಧರ ಗೌಡ ಕಣಜಾಲು, ವಿಟ್ಲ ಶಾಖಾ ಸಲಹಾ ಸಮಿತಿ ಸದಸ್ಯರುಗಳಾದ ಸದಾನಂದ ಗೌಡ ಸೇರಾಜೆ, ಪುನೀತ್ ಮಾಡತ್ತಾರು, ಚಂದಪ್ಪ ಗೌಡ ಪೈಸಾರಿ, ವಿಶ್ವನಾಥ ನಾಯ್ತೊಟ್ಟು, ಸುನಂದ ಆರ್.ವಿ., ಶಿವರಾಮ ಗೌಡ ಮಲಾರು, ರಾಧಕೃಷ್ಣ ಕೆ ಕುಡೂರು, ಜಯಾನಂದ.ಪಿ ದೇವರಮನೆ, ರಮೇಶ್ ಬಿ ವರಪ್ಪಾದೆ, ಗೌಡರ ಯಾನೆ ಒಕ್ಕಲಿಗರ ಸಂಘ ರಿ. ವಿಟ್ಲ ಇದರ ಅಧ್ಯಕ್ಷರು ಸಿ.ಕೆ ಗೌಡ, ವಿಟ್ಲ ಘಟಕದ ಮಹಿಳಾ ಸಂಘದ ಅಧ್ಯಕ್ಷರಾದ ಅಮಿತಾ ಕೃಷ್ಣ, ಪ್ರಮುಖರಾದ ಚಂದ್ರಶೇಖರ ಗಿರಿನಿವಾಸ, ನೀಲಪ್ಪ ಮಾಡತ್ತಾರು, ಪ್ರೇಮಲತಾ ದೇವರಮನೆ, ಪದ್ಮಾವತಿ ಕೆದುಮೂಲೆ, ಗೋಪಾಲ ಕೃಷ್ಣ ಕೆ.ಎನ್, ಚಂದ್ರಶೇಖರ್ ನಿಡ್ಯ, ವಿಜಯಕುಮಾರ್ ಬಿ., ಶ್ರೀಲತಾ, ಸೇಸಪ್ಪ ಹಡೀಲು, ರಾಘವ ಮಾಡತ್ತಾರು, ನಿತೀನ್ ಕುಮಾರ್, ಲಕ್ಷ್ಮಣ ಆಚಾರ್ಯ, ವೀರಪ್ಪ ಗೌಡ ಅರ್ಚನ ಟೈಲರ್, ಟೌನ್ ಬ್ಯಾಂಕ್ ನ ವಿಟ್ಲ ಶಾಖಾ ವ್ಯವಸ್ಥಾಪಕರಾದ ಜ್ಯೋತಿ ಎನ್.ಎಸ್, ಸಿಬ್ಬಂದಿಗಳಾದ ಶ್ರೀಕಾಂತ್, ಉದಯ ಕುಮಾರ್, ವೆಂಕಟರಮಣ ಕೋ ಆಪರೇಟಿವ್ ಸೊಸೈಟಿ ಶಾಖಾ ವ್ಯವಸ್ಥಾಪಕರಾದ ಕುಸುಮಾಧರ, ವಿಟ್ಲ ಶಾಖಾ ವ್ಯವಸ್ಥಾಪಕರಾದ ದಿನೇಶ್ ಪೆಲತ್ತಿಂಜ, ಗುಮಾಸ್ತೆ ಹರಿಣಾಕ್ಷಿ ಪಿ., ಅಟೆಂಡರ್‌ ಪ್ರಕಾಶ್ ಬಿ , ಪಿಗ್ಮಿ ಸಂಗ್ರಾಹಕರು ಜಗದೀಶ್ ಎಂ, ಹೇಮಲತಾ ಕೆ., ಪುತ್ತೂರು ಶಾಖಾ ಸಿಬ್ಬಂದಿ ಯಶ್ವಿತ್ ಮೊದಲಾದವರು ಉಪಸ್ಥಿತರಿದ್ದರು.

ನಿರ್ದೇಶಕರು ಮತ್ತು ಸಲಹಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಗೌಡ ಕರ್ಮಲ ಸ್ವಾಗತಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿಟ್ಲ ಶಾಖಾ ವ್ಯವಸ್ಥಾಪಕರಾದ ದಿನೇಶ್ ಪೆಲತ್ತಿಂಜ
ವಂದಿಸಿದರು.

ಅತೀ ಕಡಿಮೆ ಸಮಯದಲ್ಲಿ ಬಹಳಷ್ಟು ಪ್ರಗತಿ ಹೊಂದಿದ ಶಾಖೆ
ಅತೀ ಕಡಿಮೆ ಅವಧಿಯಲ್ಲಿ ವಿಟ್ಲ ಶಾಖೆ ಬಹಳಷ್ಟು ಪ್ರಗತಿ ಹೊಂದಿದೆ ಎನ್ನಲು ಸಂತಸವಾಗುತ್ತಿದೆ. ವಿಟ್ಲ ಶಾಖೆಯಲ್ಲಿ ರೂ. 24.19ಕೋಟಿ ವ್ಯವಹಾರ ನಡೆಸಿ ರೂ. 5.60 ಕೋಟಿ ಠೇವಣಿ ಸಂಗ್ರಹ ಮಾಡಿದೆ. ರೂ. 2.68 ಕೋಟಿ ಹೊರಬಾಕಿ ಸಾಲವಿದ್ದು, 100% ಸಾಲ ವಸೂಲಾತಿಯಾಗಿದೆ. ಈ ಭಾಗದ ಜನರಿಂದ ನಮಗೆ ಉತ್ತಮ ಸಹಕಾರ ಸಿಕ್ಕಿದ್ದು,‌ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾವು ಚಿರರುಣಿಯಾಗಿದ್ದೇವೆ.
ಚಿದಾನಂದ ಬೈಲಾಡಿ
ಅಧ್ಯಕ್ಷರು
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ

LEAVE A REPLY

Please enter your comment!
Please enter your name here