






ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪೂರ್ವ ಪ್ರಾಯೋಜಿತ ರೋಟರಾಕ್ಟ್ ಕ್ಲಬ್ ತಿಂಗಳಾಡಿ ಇದರ ನೂತನ ಸಾಲಿನ (2026-27) ಅಧ್ಯಕ್ಷರಾಗಿ ಪ್ರಜ್ವತ್ ರೈ ಮಿತ್ರಂಪಾಡಿ ಇವರು ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಅಕ್ಷತ್ ರೈ ಸಿ ಮತ್ತು ಸಭಾಪತಿಯಾಗಿ ಶರತ್ ಗೌಡ ಗುತ್ತು ಇವರುಗಳು ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಲೋಹಿತ್ ಗೌಡ , ಜೊತೆ ಕಾರ್ಯದರ್ಶಿಯಾಗಿ ಲಿಖಿತ್ ಗೌಡ , ಖಜಾಂಜಿಯಾಗಿ ಪ್ರಣಾಮ್ ರೈ ಬೆದ್ರಮಾರು , ಸಲಹೆಗಾರರಾಗಿ ಅನೀಶ್ ಶೆಟ್ಟಿ ನೇಮಕಗೊಂಡಿದ್ದಾರೆ. ನಿರ್ದೇಶಕರಾಗಿ ರಕ್ಷಿತ್ ಗೌಡ, ಅಮಿತ್ ರೈ, ಅಮೋಘ್ ರಾವ್ , ಸಂತೋಷ್ ರೈ , ಕಿರಣ್ ಬೋಳೊಡಿ ಮತ್ತು ಗೌರೀಶ್ ರೈ ಯವರು ಆಯ್ಕೆಯಾಗಿದ್ದಾರೆ.



ಜುಲೈ 18 ರಂದು ಪದಪ್ರದಾನ ಸಮಾರಂಭ…
ರೋಟರ್ಯಾಕ್ಟ್ ಕ್ಲಬ್ ತಿಂಗಳಾಡಿ ಇದರ ನೂತನ ಸಾಲಿನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.18 ರಂದು ಸಂಜೆ ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಪದ ಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವ ಅಧ್ಯಕ್ಷ ರವಿಕುಮಾರ್ ರೈ ಅವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ವಚನ ಜಯರಾಮ್ , ತಿಂಗಳಾಡಿ ರೋಟರಾಕ್ಟ್ ಕ್ಲಬ್ ನ ಸ್ಥಾಪಕಾಧ್ಯಕ್ಷ ರತ್ನಾಕರ ರೈ ಮತ್ತು ಜಿಲ್ಲಾ ಪ್ರತಿನಿಧಿ ಶ್ರೀರಕ್ಷಾ ಹಾಗೂ ವಲಯ ಪ್ರತಿನಿಧಿ ಎಡ್ವರ್ಡ್ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.










