







ಪುತ್ತೂರು:ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್, ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಣೇಶೋತ್ಸವ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ ದರ್ಬೆ ವಿನಾಯಕ ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ 44ರ ವರ್ಷದ ಸಂಭ್ರಮದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಫಿಲೋ ಗಣಪನ ವಿಗ್ರಹ ಮುಹೂರ್ತ ಜು.13 ರಂದು ಪರ್ಲಡ್ಕ ಏಕದಂತ ವಠಾರದಲ್ಲಿ ನೆರವೇರಿತು.


ವಿಗ್ರಹ ರಚನೆಕಾರ ತಾರಾನಾಥ ಆಚಾರ್ಯ ಹಾಗೂ ಮನೋಜ್ಞ ಟಿ ಆಚಾರ್ಯರವರು ಧಾರ್ಮಿಕ ಪೂಜಾವಿಧಿ ವಿಧಾನದೊಂದಿಗೆ ಫಿಲೋ ಗಣಪ ವಿಗ್ರಹ ಮುಹೂರ್ತಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಫಿಲೋಮಿನಾ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಸದಸ್ಯರು, ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಮಿತ್ರರು, ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.













