







ಪೆರಾಬೆ: ಚರಿತ್ರೆ ಪ್ರಸಿದ್ಧವಾದ ಕಡಬ ತಾಲೂಕಿನ ಬೇಲ್ಪಾಡಿ ಮಖಾಂ ಷರೀಫ್‌ನಲ್ಲಿ ಪ್ರತಿ ತಿಂಗಳ 3ನೇ ಗುರುವಾರ ಮಗ್ರಿಬ್ ನಮಾಝ್ ಬಳಿಕ ನಡೆಸಿಕೊಂಡು ಬರುವ ಮಜ್ಲಿಸ್‌ನ್ನೂರ್ ಆಧ್ಯಾತ್ಮಿಕ ಸಂಗಮ ಜು.16ರಂದು ಮಗ್ರಿಬ್ ನಮಾಝ್ ಬಳಿಕ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರೀ ತಂಗಲ್ ಮಲಪ್ಪುರಂ ರವರ ನೇತೃತ್ವದಲ್ಲಿ ನಡೆಯಲಿದೆ.



ಅನೀಸ್ ನೂಜಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಮಾಹತ್ ಮುದರ್ರಿಸ್ ಅಲ್‌ಹಾಜ್ ಮೊಯಿದು ಫೈಝಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನದ ವ್ಯವಸ್ಥೆಯ ಮಾಡಲಾಗಿದೆ ಎಂದು ಜಮಾಹತ್ ಕಾರ್ಯದರ್ಶಿ ಸಿದ್ದೀಕ್ ಅಲ್ ಅಮೀನ್ ತಿಳಿಸಿದ್ದಾರೆ.












