







ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯಾಂತರಂಗದ 143ನೇ ಆವೃತ್ತಿಯಲ್ಲಿ ಕುಂದಾಪುರದ ನೃತ್ಯಗುರು ಪ್ರವಿತಾ ಅಶೋಕ್ ಅವರ ಶಿಷ್ಯೆ ಕು. ಸನ್ವಿತಾ ಶ್ರೀಧರ ಪೂಜಾರಿಯವರ ಭರತನಾಟ್ಯ ಕಾರ್ಯಕ್ರಮವು ಜು.11ರಂದು ಪ್ರದರ್ಶನಗೊಂಡಿತ್ತು.



ಕಿರಿಯ ಪ್ರಾಯದಲ್ಲಿ ಹಿರಿಯ ಸಾಧನೆ ಮಾಡಿದ ಈ ಕಲಾವಿದೆಯ ಕಾರ್ಯಕ್ರಮಕ್ಕೆ ಪುತ್ತೂರಿನ ಯುವ ಹೂಡಿಕೆ ಸಲಹೆಗಾರರಾದ ಪವನ್ ಎಸ್. ಭಟ್ ಹಾಗೂ ಅವರ ಪತ್ನಿ ವಿದುಷಿ ಅಪೂರ್ವ ಗೌರಿ ಆಗಮಿಸಿ ಮೆಚ್ಚುಗೆ ಸೂಚಿಸಿದರು. ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.












