






ಪುತ್ತೂರು: ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಮಠ ಯೂತ್ ಫೆಡರೇಶನ್ (MYF) ವತಿಯಿಂದ ಕೆರೆಮೂಲೆ ಅಂಗನವಾಡಿಗೆ ಟೇಬಲ್ ಹಾಗೂ ಚೇರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.ಅಂಗನವಾಡಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ಸಂಘವು ಈ ಪೀಠೋಪಕರಣಗಳನ್ನು ನೀಡಿದೆ.



ಈ ಸಂದರ್ಭದಲ್ಲಿ ಸಂಘದ ಸಲಹೆಗಾರರಾದ ನಜೀರ್ ಮಠ ಹಾಗೂ ರಹಿಮಾನ್ ಮಠ, ಅಧ್ಯಕ್ಷ ಸಿದ್ದಿಕ್ ಮಠ, ಪ್ರಧಾನ ಕಾರ್ಯದರ್ಶಿ ಬಶೀರ್ ಭಾರತ್, ಉಪಾಧ್ಯಕ್ಷರುಗಳಾದ ಆರಫ್ (ಮೋನು) ಹಾಗೂ ಸಲೀಂ ಫಿಶ್, ಕೋಶಾಧಿಕಾರಿ ಮುಸ್ತಫಾ – JM Electrical, ಹಾಗೂ ಸಂಘದ ಸದಸ್ಯ ನೂರುದ್ದೀನ್ ಮೆಕ್ಯಾನಿಕ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸಬಾನ ಕೊಪ್ಪಲ ಹಾಗೂ ಸಹಾಯಕಿ ರೇಖಾ ಇರ್ತಡ್ಕ ಅವರು ಉಪಸ್ಥಿತರಿದ್ದು, ಸಂಘದ ಕೊಡುಗೆಯನ್ನು ಸ್ವೀಕರಿಸಿದರು. ಸಮಾಜದ ಎಲ್ಲಾ ವರ್ಗದ ಏಳಿಗೆಗಾಗಿ ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸುವುದಾಗಿ ಮಠ ಯೂತ್ ಫೆಡರೇಶನ್ ಪದಾಧಿಕಾರಿಗಳು ತಿಳಿಸಿದರು.












