ಸಂಪ್ಯದಲ್ಲಿ ಮಹಿಳೆಗೆ ಜೀವ ಬೆದರಿಕೆ ಪ್ರಕರಣ: ಆರೋಪಿ ಹಸೈನಾರ್ ದೋಷ ಮುಕ್ತ

0

ಪುತ್ತೂರು: ಮಹಿಳೆಯೋರ್ವರು ವಾಸ ಮಾಡುತ್ತಿದ್ದ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಆರೋಪಿಯನ್ನು ಪುತ್ತೂರು ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧಿಶರಾದ ದೇವರಾಜ್ ವೈ ಎಚ್. ರವರು ದೋಷ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.


ಪುತ್ತೂರು ತಾಲೂಕು ಕುರಿಯ ಗ್ರಾಮದ ಸಂಪ್ಯದ ಮೂಲೆ ಎಂಬಲ್ಲಿಯ ನಿವಾಸಿ ಎಸ್. ಪುಷ್ಪಾವತಿ ಎಂಬವರು ದಿನಾಂಕ 27/ 3/ 2025 ರಂದು ತನ್ನ ತಮ್ಮ ರೇಖಾನಾಥ್ ಎಂಬುವರ ವಶದಲ್ಲಿರುವ ಎನ್ ಆರ್ ಸಿ ಸಿ ಜಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜಾಗದ ವಿಚಾರವಾಗಿ ಹಸೈನಾರ್ ಎಂಬವರು ಅಕ್ರಮವಾಗಿ ಪ್ರವೇಶ ಮಾಡಿ ಪುಷ್ಪಾವತಿಯನ್ನು ತಡೆದು ನಿಲ್ಲಿಸಿ ನಿನ್ನನ್ನು ನಿನ್ನ ತಮ್ಮನನ್ನು ನಾನು ಜೀವಂತವಾಗಿ ಬಿಡುವುದಿಲ್ಲ. ಅನಾವಶ್ಯಕವಾಗಿ ನನ್ನ ತಂಟೆಗೆ ಬರುತ್ತಿದ್ದೀರಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ವೇಳೆ ಶಬ್ದ ಕೇಳಿ ಅಲ್ಲೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಪುಷ್ಪಾವತಿಯ ಗಂಡ ಜೀವನ್ ದಾಸ್ ಮತ್ತು ತಮ್ಮ ರೇಖಾನಾಥ್ ಅಲ್ಲಿಗೆ ಬಂದ ವೇಳೆ ಹಸೈನಾರ್ ರವರು ತನ್ನ ಕೈಯಲ್ಲಿದ್ದ ಕತ್ತಿಯಿಂದ ಬೀಸಿದಾಗ ರೇಖಾನಾಥ್‌ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತಡೆದರು. ಆಗ ಹಸೈನಾರ್ ಕೈಯಲ್ಲಿದ್ದ ಕತ್ತಿ ರೇಖಾನಾಥರವರ ಕೈಗೆ ತಾಗಿರುತ್ತದೆ . ಈ ಹಿಂದೆ ಜಾಗದ ವಿಚಾರವಾಗಿ ನಮ್ಮ ಒಳಗೆ ಜಗಳವಾಗಿದ್ದೆ ಇದಕ್ಕೆ ಕಾರಣ ಎಂದು ಪುಷ್ಪಾವತಿಯವರು ಸಂಪ್ಯ ಪೋಲಿಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಆರೋಪಿ ಹಸೈನಾರ್ ರವರನ್ನು ಪುತ್ತೂರು ನ್ಯಾಯಾಲಯ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿಯ ಪರವಾಗಿ ನ್ಯಾಯವಾದಿ ರಮ್ಲತ್ ಎಂ ಸಾಮೆ ತಡ್ಕ ರವರು ವಾದಿಸಿದ್ದರು.

LEAVE A REPLY

Please enter your comment!
Please enter your name here