






ಪುತ್ತೂರು:ಪೂರ್ವದ್ವೇಷದಿಂದ ಹಲ್ಲೆ ನಡೆದು ಇತ್ತಂಡದವರೂ ಪೊಲೀಸರಿಗೆ ದೂರು ನೀಡಿರುವ ಘಟನೆ ತಡವಾಗಿ ವರದಿಯಾಗಿದೆ. ಘಟನೆ ತಿಂಗಳಾಡಿಯಲ್ಲಿ ಜು.2ರಂದು ಮಧ್ಯಾಹ್ನ ನಡೆದಿದೆ.


ಈ ಹಿಂದೆ ಸುಹಾಸ್ ಶೆಟ್ಟಿ ಮತ್ತು ಅಮರ್ ರೈ ಎಂಬವರು ತನಗೆ ಹಲ್ಲೆ ನಡೆಸಿದ ವೀಡಿಯೋವನ್ನು ಸುದಿನ್ ರೈ ಅವರ ಮೊಬೈಲ್‌ನಿಂದ ಡಿಲೀಟ್ ಮಾಡಿಸುವಂತೆ ನಿತಿಲ್ ಶೆಟ್ಟಿ ಎಂಬವರ ಮೂಲಕ ಹೇಳಿಸಿದ ಕಾರಣಕ್ಕಾಗಿ ತನ್ನ ಮೇಲೆ ದಿನೇಶ್ ಗೌಡ, ಅಮರ್ ರೈ, ಸುಜಿತ್ ಸಂಟ್ಯಾರ್ ಎಂಬವರು ಹಲ್ಲೆ ನಡೆಸಿರುವುದಾಗಿ ನಿತೇಶ್ ಶೆಟ್ಟಿ ಚಾವಡಿ ಎಂಬವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಲಂ 115(2),351(2),126(2),3(5) ಬಿಎನ್ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



ಇದೇ ಘಟನೆಗೆ ಸಂಬಂಧಿಸಿ ಟ್ಯಾಂಕರ್ ಚಾಲಕ ದಿನೇಶ್ ಗೌಡ ಕಜೆ ಅವರು ನೀಡಿದ ದೂರಿನ ಮೇರೆಗೆ ನಿತೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಈ ಹಿಂದೆ ನಿತೇಶ್ ಗೆ ಯಾರೋ ಹಲ್ಲೆ ಮಾಡಿದ ವೀಡಿಯೋ ಚಾವಡಿ ಸುದಿನ್‌ರವರಲ್ಲಿ ಇರುವುದಾಗಿ ಜಗದೀಶ್ ರವರು ನಿತೇಶ್ ರವರಿಗೆ ಹೇಳಿರುವ ಬಗ್ಗೆ ತಾನು ಜಗದೀಶ್ ಆಚಾರ್ಯ ಮತ್ತು ನಿತೇಶ್‌ರವರಲ್ಲಿ ವಿಚಾರಿಸಿದ ಕಾರಣಕ್ಕೆ ಈ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.ಪೊಲೀಸರು ಆರೋಪಿ ನಿತೇಶ್ ವಿರುದ್ಧ ಕಲಂ115(2),351(2),126(2) ಬಿಎನ್‌ಎಸ್ ನಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.










