ನಿಡ್ಪಳ್ಳಿ-ತಂಬುತ್ತಡ್ಕ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ-ವಾಹನ ಸವಾರರ ಪರದಾಟ- ಎದ್ದು ಹೋದ ಡಾಮರ್ ದುರಸ್ತಿಗೊಳಿಸುವಂತೆ ಸಾರ್ವಜನಿಕರ ಒತ್ತಾಯ

0

ನಿಡ್ಪಳ್ಳಿ; ಇಲ್ಲಿಯ ಕರ್ನಪ್ಪಾಡಿ ನುಳಿಯಾಲು ಹೋಗುವ ಮುಖ್ಯ ರಸ್ತೆಯಿಂದ ತಂಬುತ್ತಡ್ಕ ಬಸ್ಸು ನಿಲ್ದಾಣದ ಹತ್ತಿರದಿಂದ ಒಳಗೆ ತಂಬುತ್ತಡ್ಕ ಪೇಟೆಗೆ ಹೋಗುವ ರಸ್ತೆಯ ಡಾಮರ್ ಎದ್ದು ಹೋಗಿ ಗುಂಡಿ ಬಿದ್ದಿದ್ದು ದುರಸ್ತಿ ಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆಯ ಬದಿಯಲ್ಲಿ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ. ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ನಿಲ್ಲುವುದರಿಂದ ಕೆಸರು ತುಂಬಿ ರಸ್ತೆ ಹಾಳಾಗುತ್ತದೆ. ಜಲ್ಲಿಕಲ್ಲು ಎದ್ದು ಡಾಮರ್ ಹೋದ ರಸ್ತೆಯಲ್ಲಿ ವಾಹನ ಸಂಚಾರ ಮತ್ತು ಪಾದಾಚಾರಿಗಳು ನಡೆದಾಡಲು ಕಷ್ಟವಾಗುತ್ತಿದ್ದು ದುರಸ್ತಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಂಬುತ್ತಡ್ಕ ಪೇಟೆಗೆ ಬರುವ ಈ ರಸ್ತೆ ತುಂಬಾ ಹಾಳಾಗಿದ್ದು ಸಂಚಾರಕ್ಕೆ ಕಷ್ಟವಾಗುತ್ತಿದೆ. ಅನೇಕ ಸಮಯಗಳಿಂದ ರಸ್ತೆ ಡಾಮರ್ ಎದ್ದು ಹೋಗಿದ್ದು ತಕ್ಷಣ ದುರಸ್ತಿಗೊಳಿಸಲಿ.
ಅಲಿಕುಂಞ ತಂಬುತ್ತಡ್ಕ,
ಸ್ಥಳೀಯರು

LEAVE A REPLY

Please enter your comment!
Please enter your name here