ಜು.19: ಕಾವು ತುಡರ್ ಯುವಕ ಮಂಡಲದಿಂದ ಕೆಸರ್ದ ಗೊಬ್ಬುಲು ಕಾರ್ಯಕ್ರಮ

0

ಕಾವು: ಭಾರತ ಸರ್ಕಾರದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ನೇತೃತ್ವದಲ್ಲಿ ಕೆಸರ್ದ ಗೊಬ್ಬುಲು-2026 ಕಾರ್ಯಕ್ರಮವು ಜು.19ರಂದು ನಿರಂಜನ ರಾವ್‌ರವರ ಕಾವು ಕಮಲಡ್ಕ ಗದ್ದೆಯಲ್ಲಿ ನಡೆಯಲಿದೆ.


ಬೆಳಿಗ್ಗೆ ಗಂಟೆ 9ರಿಂದ ಸಂಜೆ 5 ಗಂಟೆಯವರೆಗೆ ಕೆಸರು ಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಕ್ಕಳಿಗೆ, ಮಹಿಳೆಯರಿಗೆ, ಯುವಕರಿಗೆ, ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಅಪರಾಹ್ನ ಪುರುಷರಿಗೆ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಪ್ರಥಮ ರೂ.5555/- ಮತ್ತು ದ್ವಿತೀಯಾ ರೂ.3333/- ನಗದು ಬಹುಮಾನವಿದ್ದು, ಯಾವ ಸ್ಪರ್ಧೆಗೂ ಪ್ರವೇಶ ಶುಲ್ಕ ಇರುವುದಿಲ್ಲ.


ಉದ್ಘಾಟನೆ:
ಕೆಸರ್ದ ಗೊಬ್ಬುಲು ಕಾರ್ಯಕ್ರಮವನ್ನು ಬೆಳಿಗ್ಗೆ ಗಂಗಾಧರ ಚಾಕೋಟೆಯವರು ಉದ್ಘಾಟನೆ ಮಾಡಲಿದ್ದು, ತುಡರ್ ಯುವಕ ಮಂಡಲದ ಅಧ್ಯಕ್ಷ ಶ್ರೀಕುಮಾರ್ ಬಲ್ಯಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಮನಮೋಹನ ಎಂ, ಮಾಡನ್ನೂರು ಜಮಾಅತ್ ಕಮಿಟಿ ಅಧ್ಯಕ್ಷ, ಯುವ ಉದ್ಯಮಿ ಅಬ್ದುಲ್ ಅಜೀಜ್ ಸಿ.ಹೆಚ್, ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್ ಕಮಲಡ್ಕರವರು ಭಾಗವಹಿಸಲಿದ್ದಾರೆ.


ಸಮಾರೋಪ:
ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯರವರು ಬಹುಮಾನ ವಿತರಣೆ ಮಾಡಲಿದ್ದು, ಅತಿಥಿಗಳಾಗಿ ಕಾವು ಭೂಮಿಕಾ ಅರ್ಥ್‌ಮೂವರ‍್ಸ್‌ನ ರವಿಪ್ರಸಾದ್ ರೈ, ಬ್ಯಾಂಕ್ ಆಫ್ ಬರೋಡಾದ ತಿಮ್ಮಣ್ಣ ನಾಯ್ಕ ಅಕಾಯಿ, ಪುತ್ತೂರು ಚಿತ್ತಾರ ಡಿಜಿಟಲ್ಸ್‌ನ ಹರೀಶ್ ಕಾವು ಹೊಸಮನೆಯವರು ಭಾಗವಹಿಸಲಿದ್ದಾರೆ.


ಕಾರ್ಯಕ್ರಮವು ಎಲ್ಲರಿಗೂ ಮುಕ್ತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತುಡರ್ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಹರ್ಷಿತ್ ಎ.ಆರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here