ಕೊಂಬೆಟ್ಟಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಹಾಲಿಂಗೇಶ್ವರ ದೇವಸ್ಥಾನದ ಜಮೀನು ದೇವಳಕ್ಕೆ ಸ್ವಾಧೀನ – ಶಾಸಕರಿಂದ ಜಮೀನಿನಲ್ಲಿ ದೇವಸ್ಥಾನದ ಫಲಕ ಅನಾವರಣ

0

ಪುತ್ತೂರು: ಕೊಂಬೆಟ್ಟಿನಲ್ಲಿ ಒತ್ತುವರಿಯಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಮಾರು 16 ಸೆಂಟ್ಸ್ ಜಾಗವನ್ನು ಜು.18ರಂದು ದೇವಳಕ್ಕೆ ಸ್ವಾಧೀನಪಡಿಸಲಾಯಿತು.


ಶಾಸಕ ಅಶೋಕ್ ರೈ ಅವರು ದೇವಳದ ಫಲಕವನ್ನು ಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭ ಮುಖ್ಯರಸ್ತೆಯಲ್ಲಿ ದೇವಳದ ಹೆಸರಿನಲ್ಲಿರುವ ಆರ್ ಟಿ ಸಿ ಇರುವ 45 ಸೆಂಟ್ಸ್ ಜಾಗವನ್ನು ಪರಿಶೀಲನೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ಈಶ್ವರ ಬೆಡೇಕರ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here