ನೀಟ್ ಫಲಿತಾಂಶ: ಪುತ್ತೂರು ಕಮ್ಯೂನಿಟಿ ಸೆಂಟರ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

0

ಪುತ್ತೂರು: ಕಳೆದ ಐದು ವರ್ಷಗಳಿಂದ ಪುತ್ತೂರು ಕಮ್ಯೂನಿಟಿ ಸೆಂಟರ್ ನಡೆಸುತ್ತಿರುವ ನಿರಂತರ ಜಾಗೃತಿ, ಪ್ರೋತ್ಸಾಹ ಮತ್ತು ಪ್ರಯತ್ನದ ಫಲವಾಗಿ ನೀಟ್ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿವಿಧ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಬೆಂಬಲ, ಮಾರ್ಗದರ್ಶನ ಮತ್ತು ನೆರವು ದೊರೆಯುತ್ತಿದೆ. ಈ ಸಕಾರಾತ್ಮಕ ಬೆಳವಣಿಗೆಯ ನಡುವೆ ಕಮ್ಯೂನಿಟಿ ಸೆಂಟರ್ ನ ವಿದ್ಯಾರ್ಥಿಗಳು ಈ ವರ್ಷವೂ 100% ಫಲಿತಾಂಶದೊಂದಿಗೆ ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು MBBS ಸೀಟು ಪಡೆದಿದ್ದಾರೆ. ಕೌನ್ಸಿಲಿಂಗ್ ಮುಗಿದ ಬಳಿಕ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.75ಕ್ಕೂ ಹೆಚ್ಚು ವಿದ್ಯಾರ್ಥಿಗಳು BDS, BAMS ಹಾಗೂ ಇನ್ನಿತರ ಮೆಡಿಕಲ್ ಕೋರ್ಸ್‌ಗಳಲ್ಲಿ ಸರಕಾರಿ ಕೋಟಾದಲ್ಲಿ ಸಾಮಾನ್ಯ ಮೊತ್ತದಲ್ಲಿ ದಾಖಲಾತಿ ಪಡೆದಿದ್ದಾರೆ ಹಾಗೂ 108 ವಿದ್ಯಾರ್ಥಿಗಳು ಸೆಂಟರ್ ಮೂಲಕ ಮತ್ತು ರಾಜ್ಯದ ವಿವಿಧ ಸಂಸ್ಥೆಗಳಲ್ಲಿ ನೀಟ್ ತರಬೇತಿ ಪಡೆದಿದ್ದು, ಎಲ್ಲಾ ತರಬೇತಿ ಸಂಸ್ಥೆಗಳಲ್ಲಿ ಸೆಂಟರ್ ನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಭಾರತ್ ಇನ್ಫ್ರಾಟೆಕ್ ನ ಎಸ್.ಎಂ ಮುಸ್ತಾಫಾ, ಅಲ್ ಮುಝೈನ್ ನ ಝಕರಿಯಾ ಜೋಕಟ್ಟೆ, ಸೆಂಟರ್ ನ ಸಂಚಾಲಕರಾದ ಸತ್ತಾರ್ ಪರ್ಲಡ್ಕ, ವೈಟ್ ಸ್ಟೋನ್ ನ ಬಿ.ಎಂ. ಶರೀಫ್ ಹಾಜಿ, ವರ್ಲ್ಡ್ ವೈಡ್ ಡೆಲ್ಟಾ ಗ್ರೂಪ್ ನ ಅಹ್ಮದ್ ಮೊಹಿದ್ದೀನ್, ಜಿ. ಎ ಬಾವಾ, ಅಸ್ಲಂ ಗುರುಕ್ಕಲ್, ಬೀ ಹ್ಯೂಮನ್ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here