






ಪುತ್ತೂರು: ಮಾಜಿ ಪ್ರದಾನಿ ಎಚ್ ಡಿ ದೇವೆಗೌಡ ಅವರ ಪತ್ನಿ ಚೆನ್ನಮ್ಮ ದೇವೇಗೌಡ (89 ವ.) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.



ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಬುಧವಾರ ರಾತ್ರಿ ಮಗಳ ಮನೆಯಲ್ಲಿರುವ ವೇಳೆ ತೀವ್ರ ಉಸಿರಾಟದ ತೊಂದರೆಗೊಳಗಾದ ಚೆನ್ನಮ್ಮ ಅವರನ್ನು ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ 4.50ರ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ.



ಚೆನ್ನಮ್ಮ ಅವರು ಪತಿ ಎಚ್ ಡಿ ದೇವೇ ಗೌಡ, ಪುತ್ರರಾದ ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ರೇವಣ್ಣ, ಎಚ್ ಡಿ ಬಾಲಕೃಷ್ಣ, ಎಚ್ ಡಿ ರಮೇಶ್, ಹಾಗೂ ಪುತ್ರಿ ಎಚ್ ಡಿ ಅನಸೂಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.









