ವಿಟ್ಲ: ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ, ಮರ್ಹೂಂ ಅಬೂಬಕ್ಕರ್ ಉಸ್ತಾದ್ ಆಂಡ್ ನೇರ್ಚೆ ಕಾರ್ಯಕ್ರಮ – ಸ್ವಾಗತ ಸಮಿತಿ ರಚನೆ

0

ಪುತ್ತೂರು: ವಿಟ್ಲದ ಟಿಪ್ಪುನಗರ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ವಿದ್ಯಾಸಂಸ್ಥೆಯ 16ನೇ ವಾರ್ಷಿಕೋತ್ಸವ ಹಾಗೂ ಸಂಸ್ಥೆಯ ಶಿಲ್ಪಿ, ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 7ನೇ ಆಂಡ್ ನೇರ್ಚೆ ಕಾರ್ಯಕ್ರಮ ಆ.16ರಂದು ನಡೆಯಲಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ದಾರುನ್ನಜಾತ್ ಅಬೂಬಕ್ಕರ್ ಉಸ್ತಾದ್ ಸ್ಮಾರಕ ಭವನದಲ್ಲಿ ನಡೆದ ‘ಲೀಡರ್ಸ್ ಸಂಗಮ’ ಕಾರ್ಯಕ್ರಮದಲ್ಲಿ ರಚಿಸಲಾಯಿತು.

ಸಮಿತಿಯ ನಿರ್ದೇಶಕರಾಗಿ ಕುಂಬೋಲ್ ಆಟಕೋಯ ತಂಙಳ್, ಶಿಹಾಬುದ್ದೀನ್ ತಂಙಳ್ ಮದಕ, ಶಮೀಮ್ ತಂಙಳ್ ಟಿಪ್ಪುನಗರ, ಶೈಖುನಾ ಓಲೆಮಂಡೋವು ಉಸ್ತಾದ್, ಶೈಖುನಾ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್, ಅಬೂಬಕ್ಕರ್ ಹಾಜಿ ಹೊಸಂಗಡಿ, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಎಂ. ಎಸ್ ಮೊಹಮ್ಮದ್, ಅಬ್ದುಲ್ ಖಾದರ್ ಫೈಝಿ ಪಾಟ್ರಕೋಡಿ, ಡಾ. ಹಸೈನಾರ್ ಟಿಪ್ಪು ನಗರ, ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಮತ್ತು ಸುನ್ನಿ ಅಬೂಬಕ್ಕರ್ ಫೈಝಿ ಪೆರುವಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಕನ್ವೀನರ್ ಆಗಿ ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಹಕೀಮ್ ಕಂಬಳಬೆಟ್ಟು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಶಾಕಿರ್ ಅಳಕೆಮಜಲ್, ಮಜೀದ್ ಬನ್ನೂರು, ಅಬೂಬಕ್ಕರ್ ನೆಲ್ಲಿಗುಡ್ಡೆ, ಕನ್ವೀನರುಗಳಾಗಿ ಖಾಸಿಂ ಸಖಾಫಿ ಕೊಳಂಬೆ, ಅಬ್ಬಾಸ್ ಮದನಿ ಕೊಡಂಗಾಯಿ, ಸಿದ್ದಿಕ್ ಸಅದಿ ಟಿಪ್ಪು ನಗರ, ಉಸ್ಮಾನ್ ಸಖಾಫಿ ಬಾಳೆಪುಣಿ, ಅಬೂಬಕ್ಕರ್ ಐಡಿ ಸಾಲೆತ್ತೂರು ಹಾಗೂ ಸಂಚಾಲಕರಾಗಿ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಆಯ್ಕೆಯಾದರು. ಸದಸ್ಯರಾಗಿ ಉಮ್ಮರ್ ವಿಟ್ಲ ಬಾಕಿಮಾರ್, ಅಬೂಬಕ್ಕರ್ ಹಾಜಿ ಕಡಂಬು, ಇಸ್ಮಾಯಿಲ್ ಹಾಜಿ ಪೆರುವಾಯಿ, ಇಬ್ರಾಹಿಂ ಮೋನು ಟಿಪ್ಪುನಗರ, ಅಬ್ದುಲ್ರಹ್ಮಾನ್ ಉಮೈದಿ, ಸುಲೈಮಾನ್ ಮುಸ್ಲಿಯಾರ್ ಕೊಡಂಗಾಯಿ, ಅಬ್ದುಲ್ ರಹ್ಮಾನ್ ಹಾಜಿ, ಅಬ್ದುಲ್ ಖಾದರ್ ಬಿ, ಅಬೂಬಕ್ಕರ್ ಟಿಪ್ಪುನಗರ, ಎಂ.ಎಸ್.ಎಂ ಸಿರಾಜ್, ಉಸ್ಮಾನ್ ಸಖಾಫಿ, ಬೋಳಂತೂರು ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಅಶ್ರಫ್ ಸಅದಿ ಯೂಸುಫ್ ಟಿಪ್ಪುನಗರ, ಖಾದರ್ ಟಿಪ್ಪುನಗರ, ಸಂಶುದ್ದೀನ್ ಮಂಗಳಪದವು, ರಹೀಮ್ ಸಖಾಫಿ ವಿಟ್ಲ ಸೇರಿದಂತೆ 80 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು

LEAVE A REPLY

Please enter your comment!
Please enter your name here