ಈಶ್ವರಮಂಗಲ ಗಜಾನನ ಶಾಲೆಯಲ್ಲಿ ಗ್ರಾಮೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯ

0

ಪುತ್ತೂರು : ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ಘಟಸಮಿತಿ ಇದರ ವತಿಯಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನ ಗ್ರಾಮೋತ್ಸವ ಸೇವಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮವು ಈಶ್ವರಮಂಗಲ ಗಜಾನನ ಶಾಲೆಯಲ್ಲಿ ನಡೆಯಿತು.

ಗಜಾನನ ಶಾಲೆಯ ಶಿಕ್ಷಕಿ ಆಶಾ ಎಮ್‌ ಅವರು ದೀಪ ಬೆಳಗಿಸಿ ಸ್ವಚ್ಚತೆಗೆ ಚಾಲನೆ ನೀಡಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪುತ್ತೂರು ತಾ ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತ್ತಡ್ಕ ಅವರು ಮಾತನಾಡಿ, ಆ.8ರಂದು ಒಡಿಯೂರು ಶ್ರೀಗಳ ಜನ್ಮದಿನವನ್ನು ಗ್ರಾಮೋತ್ಸವವಾಗಿ ಬಹಳ ವಿಭ್ರಂಜನೆಯಿಂದ ನಡೆಸಲಾಗುವುದು. ಈ ವರ್ಷ ಸ್ವಾಮಿಜಿಯವರನ್ನು ದ್ರವ್ಯಗಳಿಂದ ತುಲಾಭಾರ ಸೇವೆ ಮಾಡಲಾಗುವುದು ಎಂದರು.

ನೆ.ಮುಡ್ನೂರು ಗ್ರಾಮದ ಸೇವಾದೀಕ್ಷಕಿ ಭಾಗಿರಥಿ ಪುಳಿಮರಡ್ಕೆ, ಘಟ ಸಮಿತಿಯ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷೆ ಕವಿತಾ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮುಂಡ್ಯ ಮತ್ತು ಸದಸ್ಯರು ಉಪಸ್ಥಿತರಿದ್ದರು.ಕಾರ್ಯದರ್ಶಿ ವೇದಾವತಿ ಕಾರ್ಯಕ್ರಮ ನಿರೂಪಸಿದರು. ಚಂದ್ರಕಲಾ ಅವರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here