






ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘ ಪುತ್ತೂರು ಇದರ ವತಿಯಿಂದ ಯುವ ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಆಟಿ ಹಬ್ಬ -2026 ಜು. 19ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳು, ಬಳಿಕ ಸಭಾ ಕಾರ್ಯಕ್ರಮ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.


ಆಟಿ ಅಶುಭ ದಿನವಲ್ಲ:
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಅಕ್ಷತಾ ಎ.ಪಿ ಅವರು ಮಾತನಾಡಿ, ಆಟಿ ತಿಂಗಳಲ್ಲಿ ಪೃಕೃತಿಯನ್ನು ಪೂರಕವಾಗಿ ಬಳಸಿಕೊಳ್ಳುವುದು ಅಗತ್ಯ. ಅನೇಕ ಔಷಧೀಯ ಗುಣಗಳು ಈ ತಿಂಗಳಲ್ಲಿ ನಮಗೆ ಸಿಗುತ್ತವೆ. ಇದರ ಪ್ರಾಮುಖ್ಯತೆ ಅರಿವು ಅಗತ್ಯ. ಈ ಪರಂಪರೆ ಇವತ್ತು ಜಗತ್ತಿನ ಬೇರೆ ಬೇರೆ ಕಡೆ ಆಚರಿಸುತ್ತಾರೆ. ಹಾಗಾಗಿ ನಮ್ಮ ಪರಂಪರೆ ನಶಿಸುವುದಿಲ್ಲ. ಆಟಿ ತಿಂಗಳ ಮಹತ್ವವನ್ನು ಅರಿತಾಗ ಆಟಿ ಅಶುಭ ದಿನವಲ್ಲ ಎಂದು ತಿಳಿಯಬಹುದು ಎಂದು ಹೇಳಿದರು. ಇದೇ ಸಂದರ್ಭ ಸಂಘದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.



ಸಾಧಕಿಯರಿಗೆ ಸನ್ಮಾನ:
ಡಾ ಶಿವರಾಮ ಕಾರಂತ ಪ್ರೌಡಶಾಲಾ ಮುಖ್ಯ ಶಿಕ್ಷಕಿಯಾಗಿದ್ದು ಇದೀಗ ಅಕ್ಷರದಾಸೋಹ ಪ್ರಭಾರ ಸಹಾಯ ನಿರ್ದೇಶಕಿ ಜಲಜಾಕ್ಷಿ ಮತ್ತು ಅಬಕಾರಿ ಇಲಾಖೆಯ ಅಧಿಕಾರಿ ಪ್ರೇಮಾನಂದ ದಂಪತಿ, ಮಲ್ಲಿಗೆ ಕೃಷಿಕರಾದ ಗೀತಾ ನೆಕ್ಕಿಲಾಡಿ ಅವರನ್ನು ಸನ್ಮಾನಿಸಲಾಯಿತು. ಜಯಂತಿ ಕರ್ಕುಂಜ, ಸಂಘದ ಕೋಶಾಧಿಕಾರಿ ರೇವತಿ ವಿಶ್ವನಾಥ್ ಸನ್ಮಾನಿತರನ್ನು ಪರಿಚಯಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ನಿಕಟಪೂರ್ವ ಅಧ್ಯಕ್ಷ ರವಿ ಮುಂಗ್ಲಿಮನೆ, ಗೌರವಾಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಶುಭ ಹಾರೈಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ಮಹಿಳಾ ಸಂಘದ ಗೌರವಾಧ್ಯಕ್ಷೆ ವಾರಿಜ ಬೆಳ್ಯಪ್ಪ, ಕೋಶಾಧಿಕಾರಿ ರೇವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಸಂಧ್ಯಾ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಕಲಾ ಅತಿಥಿಗಳನ್ನು ಪರಿಚಯಿಸಿದರು. ಉಷಾ ದಯಾಮಣಿ, ಶಶಿಕಲಾ, ಅಮರನಾಥ ಗೌಡ, ಪ್ರೇಮಾನಂದ, ಪ್ರಸಾದ ಕುಮಾರ್, ವಿದ್ಯಾ ಲಿಂಗಪ್ಪ, ಪೂರ್ಣಿಮ, ಆನಂದ ಗೌಡ, ಸುಮಲತಾ ಅತಿಥಿಗಳನ್ನು ಗೌರವಿಸಿದರು. ಸಂಘದ ಉಪಾಧ್ಯಕ್ಷೆ ರತ್ನಾ ಕಿಶೋರ್ ಬೇರಿಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಕ್ಷಾ ಬೇರಿಕೆ, ಕನಿಷ್ಕ ತೆಂಕಿಲ ಪ್ರಾರ್ಥಿಸಿದರು. ಸೌಮ್ಯ ಪ್ರಸನ್ನ, ಪ್ರತಿಭಾ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ದೀಕ್ಷಾ ಸತೀಶ್ ತೆಂಕಿಲ ಬಹುಮಾನ ವಿತರಣೆಯನ್ನು ನಿರ್ವಹಿಸಿದರು. ಬೆಳಿಗ್ಗೆ ಲೀಲಾವತಿ ಕಾಣಿಚಾರ್ ಪೆರಿಯತ್ತೋಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿವಿಧ ಸಂಪ್ರದಾಯದ ವಿವಿಧ ತಿಂಡಿ ತಯಾರಿ ಸಹಿತ ಆಟೋಟ ಸ್ಪರ್ಧೆಗಳು ನಡೆಯಿತು.










