ಕಡಬ-ಕಳಾರದ ಯುವಕ ನಾಪತ್ತೆ:ದೂರು

0

ಕಡಬ: ಇಲ್ಲಿನ ಕಳಾರ ಅಡ್ಕಾಡಿ ನಿವಾಸಿ, ಯುವಕನೋರ್ವ ಜು. 16ರಿಂದ ಕಾಣೆಯಾಗಿದ್ದು, ಅವರ ಪತ್ತೆಗಾಗಿ ಕಡಬ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಅಬ್ದುಲ್ ರಶೀದ್ ಎಂಬವರ ಪುತ್ರ ಮುಹಮ್ಮದ್ ಅಕ್ಬರ್ (21) ನಾಪತ್ತೆಯಾಗಿರುವವರು.


ಈತ ಜು. 16ರಂದು ಬೆಳಗ್ಗೆ 09:30 ಗಂಟೆಗೆ ಉಪ್ಪಿನಂಗಡಿಯ ‘ರಾಯೀನ್ ಬಟ್ಟೆ ಅಂಗಡಿ’ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದು ಸಂಜೆಯಾದರೂ ಮನೆಗೆ ಮರಳಿ ಬಂದಿಲ್ಲ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಯುವಕನ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವಕನ ಪತ್ತೆಯಾದಲ್ಲಿ ಕಡಬ ಪೋಲಿಸ್ ಠಾಣೆಗೆ ಅಥವಾ ಸಮೀಪದ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

LEAVE A REPLY

Please enter your comment!
Please enter your name here