






ಪುತ್ತೂರು: ಕೋರ್ಟ್ ರಸ್ತೆಯ ಇಂದಿರಾ ಕ್ಯಾಂಟೀನ್ ಎದುರಿನ ಸಾರಥಿ ಭವನದಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರುರವರಿಂದ ವನಮಹೋತ್ಸವ ಕಾರ್ಯಕ್ರಮ ಜು.19ರಂದು ಬನ್ನೂರಿನ ಸಿದ್ಯಾಲ ಕ್ರಿಸ್ಟಲ್ ಇಂಜಿನಿಯರಿಂಗ್ ವಕ್ಸ್೯ ಮಾಲಕ ವಾಲ್ಟರ್ ಡಿ’ಸೋಜರವರ ಭೂಮಿಯಲ್ಲಿ ನೆರವೇರಿತು.



ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಇದರ ನಿಕಟಪೂರ್ವ ಅಧ್ಯಕ್ಷರೂ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಹಾಗೂ ಮನೆ ಮಾಲಕ ವಾಲ್ಟರ್ ಡಿ’ಸೋಜರವರಯ ಜೊತೆಗೂಡಿ ಕಾಡು ಜಾತಿಯ ಮತ್ತು ಹಣ್ಣುಹಂಪಲುಗಳ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.



ಈ ಸಂದರ್ಭದಲ್ಲಿ ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಸದಸ್ಯರಾದ ಪಾವ್ಲ್ ಮೊಂತೇರೊ, ರೋಶನ್ ಡಾಯಸ್, ರೋಶನ್ ಗೊನ್ಸಾಲ್ವಿಸ್, ಐವನ್ ಡಿ’ಸೋಜ, ಅರುಣ್ ಪಿಂಟೊ, ಸೈಮನ್ ಗೊನ್ಸಾಲ್ವಿಸ್, ಮೇಗಸ್ ಮಸ್ಕರೇನ್ಹಸ್, ಸೋನಲ್ ಲೋಬೊ, ರಿಯೋನ್ ಡಾಯಸ್, ಮನೆ ಮಾಲಕ ವಾಲ್ಟರ್ ಡಿ’ಸೋಜರವರ ಪತ್ನಿ ವಿನ್ನಿ ಡಿ’ಸೋಜ, ಪುತ್ರ ವಿಲ್ರೋಯ್ ಡಿ’ಸೋಜ ಹಾಗೂ ಸ್ಥಳೀಯರಾದ ಪ್ರಕಾಶ್ ರಾಜ್ ಉಪಸ್ಥಿತರಿದ್ದರು.










