ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಸಹಿತ ಚಿತ್ರ ತಂಡ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

0

ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ’ಪಿಚ್ಚರ್’ ಯಶಸ್ವಿಗೆ ವಿಶೇಷ ಪ್ರಾರ್ಥನೆ

ಪುತ್ತೂರು: ಕನ್ನಡ ಚಿತ್ರದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಜು.20ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಇಡಿ ಚಿತ್ರ ತಂಡವೇ ಭೇಟಿ ನೀಡಿದ್ದು ಶಿಲ್ಪಾ ಗಣೇಶ್ ನಿರ್ಮಾಣದಲ್ಲಿ ಶೀಘ್ರ ಬಿಡುಗಡೆಯಾಗಲಿರುವ ಕನ್ನಡ ಮತ್ತು ತುಳು ಭಾಷೆಯ ಚಲನಚಿತ್ರ ’ಪಿಚ್ಚರ್’ನ ಯಶಸ್ವಿಗಾಗಿ ಅವರು ವಿಶೇಷ ಪ್ರಾರ್ಥನೆ ಮಾಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಚಿತ್ರ ತಂಡಕ್ಕೆ ಶಾಲು ಹೊದಿಸಿ ಗೌರವಿಸಿದರು.ಶಿಲ್ಪಾ ಗಣೇಶ್ ಅವರ ಪುತ್ರಿ ತಾರಿಪ್ರಿಯ, ಚಿತ್ರದ ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ, ನಾಯಕಿ ಅಮೃತ, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರ್, ಚಿತ್ರದ ವಿತರಕ ಸಚಿನ್ ಎಸ್ ಉಪ್ಪಿನಂಗಡಿ, ಅನುರಾಗ್ ಬಂಗೇರ ಸಹಿತ ಹಲವಾರು ಮಂದಿ ಈ ಸಂದರ್ಭ ಜೊತೆಯಲ್ಲಿ ಪ್ರಾರ್ಥನೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಚಿತ್ರ ತಂಡಕ್ಕೆ ಪ್ರಸಾದ ನೀಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ ಉಪಸ್ಥಿತರಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಮಡದಿ ಶಿಲ್ಪಾ ಗಣೇಶ್. ’ಮಳೆಯಲಿ ಜೊತೆಯಲಿ’, ’ಮುಗುಳುನಗೆ’, ’ಕೂಲ್’ ಸಿನಿಮಾಗಳನ್ನ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ. ಇದೀಗ ಬಹುಕಾಲದ ಬಳಿಕ ಶಿಲ್ಪಾ ಗಣೇಶ್ ಮತ್ತೆ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ’ಪಿಚ್ಚರ್’ ಎಂಬ ಚಿತ್ರವನ್ನ ಶಿಲ್ಪಾ ಗಣೇಶ್ ನಿರ್ಮಿಸಿದ್ದಾರೆ.

LEAVE A REPLY

Please enter your comment!
Please enter your name here