







ಪೆರಾಬೆ: ಕಡಬ ತಾಲೂಕಿನ ಕುಂತೂರು ಬೇಲ್ಪಾಡಿ ಮಖಾಮ್‌ನಲ್ಲಿ ಬೇಲ್ಪಾಡಿ ಎ ಮತ್ತು ಬಿ ಜುಮಾ ಮಸೀದಿ ವತಿಯಿಂದ ಪ್ರತಿ ತಿಂಗಳು ನಡೆಸಿಕೊಂಡು ಬರುವ ಮಾಸಿಕ ಬೇಲ್ಪಾಡಿ ಮಜ್ಲಿಸ್‌ನ್ನೂರ್ ಮಗ್ರಿಬ್ ನಮಾಝ್ ಬಳಿಕ ನಡೆಯಿತು.



ಬೆಳ್ತಂಗಡಿ ದಾರುಸ್ಸಲಾಂ ಪ್ರಾಂಶುಪಾಲರಾದ ಸಯ್ಯಿದ್ ಝೈನುಲ್ ಅಭಿದೀನ್ ಜಿಫ್ರಿ ತಂಙಳ್ ಮಲಪ್ಪುರಂ ನೇತೃತ್ವ ವಹಿಸಿದ್ದರು. ಜಮಾಅತ್ ಮುದರ್ರಿಸ್ ಹಾಜಿ ಮೊಯಿದು ಫೈಝಿ ಎಡಪ್ಪಾಲ್ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷರಾದ ಅನೀಸ್ ನೂಜಿಲ ಅಧ್ಯಕ್ಷತೆ ವಹಿಸಿದ್ದರು. ಹೆಚ್‌ಐ ಮದ್ರಸ ಮಾಜಿ ಸದರ್ ಹಾಶೀಮ್ ರಹ್ಮನಿ, ಮುದರ್ರಿಸ್ ಉಮರುಲ್ ಫಾರೂಕ್ ದಾರಿಮಿ, ಯೂಸುಫ್ ಮುಸ್ಲಿಯಾರ್, ಅಬೂಬಕ್ಕರ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಹಸನ್ ಇರ್ಫಾನಿ ಸ್ವಾಗತಿಸಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲ್‌ಅಮೀನ್ ವಂದಿಸಿದರು.













