ಕುದ್ಮಾರು ಶಾಲೆಗೆ ಗುರುಕಾಣಿಕೆ ಗುರು ಬಳಗದಿಂದ ಗ್ರೀನ್ ಬೋರ್ಡ್ ಕೊಡುಗೆ

0

ಕಾಣಿಯೂರು: ಡಿ. ಪ್ರದೀಪ್ ಬಾಕಿಲ ಅವರ ಸ್ಮರಣಾರ್ಥವಾಗಿ ಹುಟ್ಟಿಕೊಂಡ ಗುರುಕಾಣಿಕೆ ಅನ್ನುವ ಗುರು ಬಳಗವು ಹಲವು ಸಮಾನ ಮನಸ್ಕರಿಂದ ಮಾಸಿಕವಾಗಿ ಸ್ವ ಇಚ್ಛೆಯಿಂದ ಒಂದಷ್ಟು ಹಣವನ್ನು ಸಂಗ್ರಹಿಸುತ್ತದೆ. ತಿಂಗಳ ಕೊನೆಗೆ ಚೀಟಿ ಎತ್ತುವುದರ ಮೂಲಕ ಒಂದು ಶಾಲೆಯನ್ನು ಆಯ್ಕೆ ಮಾಡಿ ರೂ 10,000 ಮೌಲ್ಯದ ಕೊಡುಗೆಯನ್ನು ಶಾಲೆಗೆ ನೀಡಲಾಗುತ್ತಿದ್ದು, ಈ ತಿಂಗಳ ಕೊಡುಗೆಯು ಕುದ್ಮಾರು ಸ.. ಹಿ. ಪ್ರಾ. ಶಾಲೆಗೆ ಲಭಿಸಿದೆ. ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತ ಮುಖ್ಯಶಿಕ್ಷಕರು ಅಥವಾ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮವು ನಡೆಯುತ್ತದೆ. ಜು 18ರಂದು ಈ ಕೊಡುಗೆ ಹಸ್ತಾಂತರವು ಕುದ್ಮಾರು ಸ.ಉ.ಹಿ. ಪ್ರಾ. ಶಾಲೆಯಲ್ಲಿ ನಡೆಯಿತು. ನಿವೃತ್ತ ಮುಖ್ಯಶಿಕ್ಷಕರಾದ ಕುಶಾಲಪ್ಪ ಬಿ ಇವರನ್ನು ಗುರುತಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಗುರುಕಾಣಿಕೆಯ ವಿವಿಧ ಸದಸ್ಯರುಗಳು, ಸಿ ಆರ್ ಪಿ ಜಯಂತ್ ವೈ, ಪ್ರಾಥಮಿಕ ಶಾಲಾ ಶಿಕ್ಷಕ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್ ನೆಲ್ಯಾಡಿ, ಹಿರಿಯ ಶಿಕ್ಷಕರಾದ ಶೀನಪ್ಪ ನಾಯ್ಕ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ ನೂಜಿ , ಶಾಲಾ ಮುಖ್ಯಗುರು ಮಿನಿ ವರ್ಗಿಸ್ , ಶಾಲಾ ಎಸ್ ಡಿ ಎಂ ಸಿ ಸದಸ್ಯರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here