







ಪುತ್ತೂರು:ಪುತ್ತೂರಿನ ಹೆಗ್ಗಡೆ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 30 ಸೆಂಟ್ ನಿವೇಶನ ಮಂಜೂರುಗೊಂಡಿದ್ದು ಸಮಾಜ ಬಾಂಧವರು ನಿವೇಶನ ಮಂಜೂರುಗೊಳಿಸಿದ ಪುತ್ತೂರು ಶಾಸಕರಾದ ಅಶೋಕ್ ರೈ ಅವರನ್ನು ಕಚೇರಿಗೆ ಬಂದು ಸನ್ಮಾನಿಸಿದರು.


ಈ ಬಗ್ಗೆ ಮಾತನಾಡಿದ ಹೆಗ್ಗಡೆ ಸಮಾಜ ಸಂಘದ ಗೌರವಾಧ್ಯಕ್ಷರಾದ ಬಿ ನಾರಾಯಣ ಹೆಗ್ಗಡೆ‘ ನಾವು ಕಳೆದ 40 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಹೆಗ್ಗಡೆ ಸಮಾಜ ಸಂಘವನ್ನು ಸ್ಥಾಪನೆ ಮಾಡಿದ್ದೆವು. ನಮ್ಮ ಸಂಘದ ಕಾರ್ಯಚಟುವಟಿಕೆ ಮಾಡಲು ಯಾವುದೇ ಸಬಾ ಭವನ ಇರುವುದಿಲ್ಲ. ನಮ್ಮ ಸಮಾಜ ಸಂಘಕ್ಕೆ ನಿವೇಶನ ಕೊಡಿ ಎಂದು ಕಳೆದ 40 ವರ್ಷಗಳಿಂದ ಪುತ್ತೂರಿನ ಶಾಸಕರುಗಳು, ಸಂಸದರಿಗೆ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೆವು ಆದರೆ ಯಾರೂ ನಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ, ನಾವು ಕೊಟ್ಟ ಮನವಿಗೆ ಬೆಲೆಯೇ ಕೊಡಲಿಲ್ಲ. ಕಳೆದ ಮೇ ತಿಂಗಳಲ್ಲಿ ನಾವು ಶಾಸಕ ಅಶೋಕ್ ರೈ ಅವರ ಬಳಿ ಬಂದು ಈ ಬಗ್ಗೆ ಚರ್ಚೆ ಮಾಡಿ ಮನವಿಯನ್ನು ನೀಡಿದ್ದೆವು. ಮನವಿ ಮಾಡಿದ ಎರಡೇ ತಿಂಗಳಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ನಮ್ಮ ಸಂಘಕ್ಕೆ 30 ಸೆಂಟ್ ಜಾಗವನ್ನು ಮಂಜೂರುಗೊಳಿಸುವಲ್ಲಿ ಬೇಕಾದ ಎಲ್ಲಾ ಸಹಕಾರವನ್ನು ಮಾಡಿದ್ದಾರೆ. ಮುಂದಿನ ಕೆಲವೇ ತಿಂಗಳಲ್ಲಿ ನಮ್ಮ ಸಮಾಜ ಸಂಘಕ್ಕೆ 30 ಸೆಂಟ್ ಜಾಗ ಸಿಗಲಿದೆ ಎಂದು ಹೇಳಿದರು.



ಪ್ರಧಾನ ಕಾರ್ಯದರ್ಶಿ ಶಿವಾನಂದ ಹೆಗ್ಗಡೆ ಮಾತನಾಡಿ, ನಮ್ಮ ಸಮಾಜ ಸಂಘಕ್ಕೆ ನಿವೇಶನ ಕೊಡಿಸುವುದಾಗಿ ಶಾಸಕ ಅಶೋಕ್ ರೈ ಎರಡು ತಿಂಗಳ ಹಿಂದೆ ಮಾತುಕೊಟ್ಟಿದ್ದರು. ಆ ಬಳಿಕ ನಾವು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಿದ್ದಪಡಿಸಿ ಅವರಲ್ಲಿ ನೀಡಿದ್ದು , ಕ್ಯಾಬಿನೆಟ್ ಹಂತಕ್ಕೂ ಅದನ್ನು ಕೊಂಡೊಯ್ದು ಅದನ್ನು ಮಂಜೂರುಗೊಳಿಸುವಲ್ಲಿ ಯಶಶ್ವಿಯಾಗಿದ್ದಾರೆ, ಕೆಲವೇ ತಿಂಗಳಲ್ಲಿ ನಮಗೆ ನಿವೇಶನ ಮಂಜೂರಾತಿಯಾಗಲಿದೆ. ಈ ರೀತಿಯ ಅಧ್ಬುತ ಕೆಲಸಗಳನ್ನು ಮಾಡುವ ಶಾಸಕರು ಪುತ್ತೂರಿನಲ್ಲಿ ಹಿಂದೆಯೂ ಬಂದಿಲ್ಲ, ಮುಂದೆಯೂ ಬರುವುದಿಲ್ಲ. ಬಡವರ, ಬಡ ಸಮಾಜ ಬಾಂಧವರ ಕೆಲಸವನ್ನು ಮಾಡಿಕೊಡುವಲ್ಲಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ ಮುಂದೆಯೂ ಪುತ್ತೂರಿನಲ್ಲಿ ಅಶೋಕ್ ರೈ ಅವರೇ ಶಾಸಕರಾಗಿ ಆಯ್ಕೆಯಾಗಬೇಕು. ಪುತ್ತೂರು ಅಭಿವೃದ್ದಿಯಾಗಬೇಕಾದರೆ ಅಶೋಕ್ ರೈ ಅವರೇ ಶಾಸಕರಾಗಿರಬೇಕು ಬೇರೆ ಯಾರೇ ಶಾಸಕರಾದರೂ ಈ ರೀತಿಯಾಗಿ ಕೆಲಸ ಆಗಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಬಾನುಮತಿ ಹೆಗ್ಗಡೆ, ಕಾರ್ಯದರ್ಶಿ ಜಯಂತ್ ಹೆಗ್ಡೆ ಮುಳಿಯ,ಕಾನೂನು ಸಲಹೆಗಾರ ಸೂರ್ಯನಾರಾಯಣ ಹೆಗ್ಡೆ, ಸದಸ್ಯರಾದ ಜಯಂತಿ ಹೆಗ್ಡೆ,ಚೇತನ್ ವಿವೇಕ್ ಹಗ್ಡೆ, ಮಮತಾ ಹೆಗ್ಡೆ ಉಪಸ್ಥಿತರಿದ್ದರು.
ಹೆಗ್ಗಡೆ ಸಮಾಜ ಅಶೋಕ್ ರೈ ಜೊತೆಗೆ ನಿಲ್ಲುತ್ತದೆ
ಮುಂದಿನ ಚುನಾವಣೆಯಲ್ಲಿ ಪುತ್ತೂರು ಹೆಗ್ಗಡೆ ಸಮಾಜ ಶಾಸಕ ಅಶೋಕ್ ರೈ ಅವರಿಗೆ ಬೆಂಬಲವನ್ನು ನೀಡಲಿದೆ. 40 ವರ್ಷಗಳ ನಮ್ಮ ಬೇಡಿಕೆ ಈಡೇರಿಸಿದ ಏಕೈಕ ಶಾಸಕರಾದ ಅಶೋಕ್ ರೈ ಅವರೇ ಮುಂದೆ ಶಾಸಕರಾದರೆ ನಮ್ಮಂತಹ ಅದೆಷ್ಟೋ ಬಡ ಸಮುದಾಯ ಏಳಿಗೆ ಕಾಣಲು ಸಾಧ್ಯ. ನಮ್ಮ ಸಮಾಜದ ಬೆಂಬಲ ಅವರಿಗೆ ದೊರೆಯುತ್ತದೆ
ಬಿ ನಾರಾಯಣ ಹೆಗ್ಗಡೆ, ಗೌರವಾಧ್ಯಕ್ಷರು,ಹೆಗ್ಗಡೆ ಸಮಾಜ ಸಂಘ










