








ಪುತ್ತೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮುಂಡಿ ಬೆಟ್ಟ ಮೈಸೂರು ಆಯೋಜಿಸಿದ ಆಷಾಢ ಮಾಸ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಕುರಿಯ ವಿಶ್ವಗುರು ಭರತನಾಟ್ಯ ಸಂಗೀತ ಕಲಾ ಶಾಲಾ ತಂಡ ಭರತನಾಟ್ಯ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿತು.



ವಿದುಷಿ ಭಾಗ್ಯಶ್ರೀ ರೈ ಮತ್ತು ಕುಮಾರಿ ವಿಂಧ್ಯಾಶ್ರೀ ರೈ ಇವರ ನಿರ್ದೇಶನದಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ತ್ವಿಶ ವಿ ಹೆಚ್, ಧನ್ವಿ ವಿ ಶೆಟ್ಟಿ, ಶೃಂಗ ಎಸ್ ರೈ, ಮನ್ವೇಶ್ ಶೆಟ್ಟಿ ಎಸ್, ಧನ್ವಿ ಎನ್ ರಾವ್, ವೃಂದ ರಾವ್ ಭಾಗವಹಿಸಿದ್ದರು.













