







ಪುತ್ತೂರು: ಶ್ರೀ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಹಾಗೂ ಶ್ರವಣರಂಗ ಸವಣೂರು ಹಮ್ಮಿಕೊಂಡಿರುವ “ಯಕ್ಷಾಷಾಢ -4” ತಾಳಮದ್ದಳೆ ಕಾರ್ಯಕ್ರಮ ಜು.22ರಂದು ನಡೆಯಿತು.


“ಜಾಬಾಲಿ ನಂದಿನಿ ” ಎಂಬ ಆಖ್ಯಾನ ದೊಂದಿಗೆ ನಡೆದ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಗೋಪಾಲಕೃಷ್ಣ ಭಟ್ ನೇಮಿಷ, ಆನಂದ ಸವಣೂರು, ಹಾಗೂ ಚೆಂಡೆ ಮದ್ದಳೆಗಳಲ್ಲಿ ಮೋಹನ ಶರವೂರು, ತಾರಾನಾಥ ಸವಣೂರು, ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಸಹಕರಿಸಿದರು. ಮುಮ್ಮೇಳದಲ್ಲಿ ಗಣರಾಜ ಕುಂಬ್ಳೆ ( ಜಾಬಾಲಿ ), ಭಾಸ್ಕರ್ ಬಾರ್ಯ ( ದೇವೇಂದ್ರ ), ಶುಭಾ ಜೆ.ಸಿ. ಅಡಿಗ ( ನಂದಿನಿ ) ಸಹಕರಿಸಿದರು, ಶ್ರೀದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು ತಾರಾನಾಥ ಸವಣೂರು ಸ್ವಾಗತಿಸಿದರು. ಪ್ರಧಾನ ಅರ್ಚಕ ರಾಘವೇಂದ್ರ ಭಟ್ ವಂದಿಸಿದರು.













