ಪುತ್ತೂರು ಆದರ್ಶ ಆಸ್ಪತ್ರೆ ಬಳಿಯ ವ್ಯಾಪಾರಿ ರಮೇಶ್ ಗೌಡ ಹೃದಯಾಘಾತದಿಂದ ನಿಧನ

0

ಪುತ್ತೂರು: ಪುತ್ತೂರು ಆದರ್ಶ ಆಸ್ಪತ್ರೆ ಬಳಿಯ ವ್ಯಾಪಾರಿ, ಪತ್ರಿಕೆ ವಿತರಕ ರಮೇಶ್ ಗೌಡ(48ವ) ಅವರು ಜು.22 ರಂದು ರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮೂಲತಃ ಬಂದಾರು ನಿವಾಸಿಯಾಗಿರುವ ರಮೇಶ್ ಗೌಡ ಹಲವಾರು ವರ್ಷಗಳಿಂದ ಪುತ್ತೂರು ಆದರ್ಶ ಆಸ್ಪತ್ರೆಯ ಬಳಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು ಸೂತ್ರಬೆಟ್ಟುವಿನಲ್ಲಿ ವಾಸ್ತವ್ಯ ಹೊಂದಿದ್ದರು. ಜೊತೆಗೆ ಪತ್ರಿಕಾ ವಿತರಣೆಯನ್ನೂ ಮಾಡುತ್ತಿದ್ದರು. ಜು.22 ರಂದು ರಾತ್ರಿ ಮನೆಯಲ್ಲಿ ಊಟದ ಸಮಯ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸ್ಥಳೀಯರಾದ ನಗರಸಭಾ ನಿಕಟಪೂರ್ವ ಸದಸ್ಯ ಪ್ರೇಮ್ ಅವರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರಗೆ ಬರುವಷ್ಟರಲ್ಲೆ ಅವರು ಹೃದಯಾಘಾತಕ್ಕೆ ಬಲಿಯಾದರು. ಮೃತರು ಪತ್ನಿ, ಮನೆಯವರನ್ನು ಅಗಲಿದ್ದಾರೆ‌.

LEAVE A REPLY

Please enter your comment!
Please enter your name here