ಇಂದು ಪ್ರಕೃತಿ ಮಾರೂರು, ಡಾ.ಮಹಿಮಾ ಪಣಿಕ್ಕರ್‌ ಭರತನಾಟ್ಯ : ನೃತ್ಯೋಪಾಸನಾ ಕಲಾ ಅಕಾಡೆಮಿ ಆಯೋಜನೆ

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪ್ರಸ್ತುತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ನೃತ್ಯ ತರಂಗಿಣಿ- 6’ ಸರಣಿ ಕಾರ್ಯಕ್ರಮದಲ್ಲಿ
ಇಬ್ಬರು ಕಲಾವಿದೆಯರ ಭರತನಾಟ್ಯ ಜು. 26 ರಂದು ಸಂಜೆ 5 ಗಂಟೆಗೆ ಪುತ್ತೂರು ಜೈನಭವನದಲ್ಲಿ ಪ್ರದರ್ಶನಗೊಳ್ಳಲಿದೆ.

ಗುರು ವಿದುಷಿ ಸುಖದಾ ಬರ್ವೆ ಮೂಡುಬಿದಿರೆ ಅವರ ಶಿಷ್ಯೆ ಪ್ರಕೃತಿ ಮಾರೂರು ಮತ್ತು ಗುರು ವಿದುಷಿ ವಿದ್ಯಾಮನೋಜ್‌ ಕಲ್ಲಡ್ಕ ಇವರ ಶಿಷ್ಯೆ ವಿದುಷಿ ಡಾ.ಮಹಿಮಾ ಎಂ.ಪಣಿಕ್ಕರ್‌ ವಿಶೇಷ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here