ಪುತ್ತೂರಿನಲ್ಲಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರಿಂದ ಕಾರ್ಗಿಲ್ ವಿಜಯ ದಿವಸ್, ಮನ್ ಕೀ ಬಾತ್ , ಎಸ್.ಐ.ಆರ್ ಮಹಾ ಅಭಿಯಾನ

0

ಪುತ್ತೂರು: ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಪುತ್ತೂರಿನಲ್ಲಿ ಕಾರ್ಗಿಲ್ ವಿಜಯ ದಿವಸ್, 136ನೇ ಮನ್ ಕೀ ಬಾತ್ ವೀಕ್ಷಣೆ, ಎಸ್.ಐ.ಆರ್ ಮಹಾ ಅಭಿಯಾನ ಹಾಗೂ ಹಿರಿಯ ಕಾರ್ಯಕರ್ತರ ಭೇಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.


ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಪುತ್ತೂರಿನಲ್ಲಿ ಮಾಜಿ ಸೈನಿಕ ಸುರೇಶ್ ಶೆಣೈ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ ಅವರನ್ನು ವಿಶೇಷವಾಗಿ ಸನ್ಮಾನಿಸಿದರು. ಇದೇ ಸಂದರ್ಭ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 12 ವರ್ಷಗಳ ‘ವಿಶ್ವಾಸ, ವಿಕಾಸ ಮತ್ತು ಜನ ಕಲ್ಯಾಣ’ದ ಸುಶಾಸನದ ಪ್ರಯುಕ್ತ, ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರ ಮನೆಗಳಿಗೆ ತೆರಳಿ ಕೃತಜ್ಞತೆ ಸಲ್ಲಿಸಿದ ಕಿಶೋರ್ ಕುಮಾರ್ ಅವರು ಪಕ್ಷದ ಹಿರಿಯರಾದ ಚೆನ್ನಮ್ಮ, ಅಶೋಕ್, ವಾಸುದೇವ ಪೈ ಹಾಗೂ ಗಣೇಶ ಹೆಗಡೆ ಅವರ ಮನೆಗಳಿಗೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.


136ನೇ ಮನ್ ಕೀ ಬಾತ್ ವೀಕ್ಷಣೆ:
ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮವಾದ ’ಮನ್ ಕೀ ಬಾತ್’ನ 136ನೇ ಸಂಚಿಕೆಯನ್ನು ಪುತ್ತೂರು ನಗರ ಮಂಡಲದ ಸಂಜಯ ನಗರ ಶಕ್ತಿ ಕೇಂದ್ರದ ಬೂತ್ ಸಂಖ್ಯೆ 150 ರಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಶಾಸಕರು ವೀಕ್ಷಿಸಿದರು.


ಎಸ್.ಐ.ಆರ್ ಮಹಾ ಅಭಿಯಾನದಡಿ ವ್ಯಾಪಕ ಮನೆ-ಮನೆ ಸಂಪರ್ಕ:
ಪುತ್ತೂರು ನಗರ ಮಂಡಲ ವ್ಯಾಪ್ತಿಯಲ್ಲಿ ಸಂಘಟನಾತ್ಮಕ ದೃಷ್ಟಿಯಿಂದ ’ಎಸ್.ಐ.ಆರ್ ಮಹಾ ಅಭಿಯಾನ’ದ ಅಂಗವಾಗಿ ಶಾಸಕರು ಬಿರುಸಿನ ಮನೆ-ಮನೆ ಭೇಟಿ ಕಾರ್ಯಕ್ರಮವನ್ನು ನಡೆಸಿದರು. ಸಂಜಯ ನಗರ, ಬೆದ್ರಾಳ, ಸಾಲ್ಮರ, ಕೃಷ್ಣನಗರ, ತಾರಿಗುಡ್ಡೆ, ದರ್ಬೆ, ಮುಕ್ರಪಾಡಿ, ಬನ್ನೂರು, ಕಲ್ಲೇಗದಲ್ಲಿ ಮನೆ ಮನೆ ಭೇಟಿ ನೀಡಿದ ಬಳಿಕ ನೆಲ್ಲಿಕಟ್ಟೆಯಲ್ಲಿ ವಿಶೇಷ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭ ಪುತ್ತೂರು ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರ ಮಂಡಲದ ಕಾರ್ಯದರ್ಶಿ ಶಶಿಧರ್ ನಾಯಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತಾ, ನಗರ ಮಂಡಲದ ಉಪಾಧ್ಯಕ್ಷ ಸಂತೋಷ್ ಕುಮಾರ್, ಸುರೇಶ್ಚಂದ್ರ ರೈ, ಸುನಿತ್ ಭಟ್ ಮತ್ತು ಕಾರ್ಯಕರ್ತರು ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here