







ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ವಿಶಾಲ್ ಅವರಿಗೆ ಅರುಣ ಸಾರಥಿ ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯ ನೀಡಲಾಯಿತು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಿಂದವಿ ಕಚೇರಿಯಲ್ಲಿ ಧನಸಹಾಯವನ್ನು ಹಸ್ತಾಂತರಿಸಲಾಯಿತು.



ಅರುಣ ಸಾರಥಿ ಸಂಘಟನೆಯು ಈವರೆಗೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಒಟ್ಟು 2,40,000 ರೂಪಾಯಿ ಧನಸಹಾಯವನ್ನು ನೀಡಿದೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸಂದೇಶ್ ನಾಯ್ಕ್ ಕೆಯ್ಯೂರು, ಸಚಿನ್ ವಳತ್ತಡ್ಕ, ಸುರೇಶ್ ಬಂಗಾರಡ್ಕ, ಶಿವಪ್ರಸಾದ್ ಆಚಾರ್ಯ ಮುಕ್ರಂಪಾಡಿ, ಪ್ರಜ್ವಲ್ ಘಾಟೆ ಮೊದಲಾದವರು ಉಪಸ್ಥಿತರಿದ್ದರು.










