ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಆರ್‌ಎಸ್‌ಐ ಜಯಾನಂದ ರೈ ಪರ್ಪುಂಜ ನಿವೃತ್ತಿ,ಬೀಳ್ಕೊಡುಗೆ

0

ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದವರು- .ಹೇಮಂತ್ ಕುಮಾರ್
ಕರ್ತವ್ಯವೇ ದೇವರೆಂದು ಬಗೆದು ಜೀವಿಸಿದ ನಿಷ್ಠಾವಂತ -ವಿಶ್ವನಾಥ ನಾಯಕ್
ಏನೆ ಸವಾಲು, ಸಮಸ್ಯೆ ಬರಲಿ ಅದನ್ನು ಧೈರ್ಯದಿಂದ ಎದುರಿಸಿದ ಶ್ರಮಜೀವಿ-ಮುದ್ದು ಮಾರಯ್ಯ

ಪುತ್ತೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸುಮಾರು 37 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾದ ಮೀಸಲು ಪೊಲೀಸ್ ಪಡೆಯ ಮಂಗಳೂರು 7ನೇ ಘಟಕದ ಮೀಸಲು ಪೊಲೀಸ್ ಉಪನಿರೀಕ್ಷಕ (ಆರ್‌ಎಸ್‌ಐ) ಜಯಾನಂದ ರೈ ಪರ್ಪುಂಜ ಅವರಿಗೆ ಬೀಳ್ಕೊಡುಗೆ ಸಮಾರಂಭ ಮಂಗಳೂರು 7ನೇ ಘಟಕದ ಕೇಂದ್ರ ಸ್ಥಾನದಲ್ಲಿ ಜು.31 ರಂದು ನಡೆಯಿತು.

ನಿವೃತ್ತರನ್ನು ಸನ್ಮಾನಿಸಿದ ಕಮಾಂಡೆಟ್ ಯು.ಎಂ.ಹೇಮಂತ್ ಕುಮಾರ್ ಮಾತನಾಡಿ ಕರ್ತವ್ಯ ನಿಷ್ಠರಾಗಿದ್ದ ಜಯರಾಮ ರೈಯವರು ಎಲ್ಲರಿಗೂ ಉತ್ತಮ ಮಾರ್ಗದರ್ಶಕರಾಗಿದ್ದರು. ಉತ್ತಮ ಸಂಸ್ಕಾರ ಮತ್ತು ಸಮಾಜಮುಖಿ ದೃಷ್ಠಿಕೋನದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತಿದ್ದು ಅವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಹಾರೈಸಿದರು.

ಡೆಪ್ಯುಟಿ ಕಮಾಂಡೆಂಟ್ ವಿಶ್ವನಾಥ ನಾಯಕ್ ಮಾತನಾಡಿ ಕರ್ತವ್ಯವೇ ದೇವರೆಂದು ಬಗೆದು ಯಾವುದೇ ಸಮಯವಾದರು ಸರಿ ಹಿಡಿದ ಕೆಲಸವನ್ನು ನಿಷ್ಠೆಯಿಂದ ಮಾಡಿದ ಧಣಿವಿಲ್ಲದೆ, ಬಿಡುವಿಲ್ಲದೆ ದುಡಿದ ನಿಷ್ಠಾವಂತ ಅವರ ಮಾನವೀಯ ಮೌಲ್ಯಗಳು ಎಲ್ಲರಿಗೂ ಪ್ರೇರಣಾದಾಯಕವಾಗಿತ್ತು ಅವರ ನಿವೃತ್ತ ಜೀವನ ದೇವರ ಆಶೀರ್ವಾದದಿಂದ ಆಯುರಾರೋಗ್ಯದಿಂದ ಕೂಡಿರಲಿ ಎಂದರು.

ಅಸಿಸ್ಟೆಂಟ್ ಕಮಾಂಡೆಂಟ್ ಮುದ್ದು ಮಾರಯ್ಯ ಮಾತನಾಡಿ ಏನೆ ಸವಾಲು, ಸಮಸ್ಯೆ ಬರಲಿ ರಾತ್ರಿ ಹಗಲೆನ್ನದೆ ದೈರ್ಯದಿಂದ ಎದುರಿಸಿ ಕರ್ತವ್ಯ ಬದ್ದತೆ ಮೆರೆದ ಶ್ರಮಜೀವಿ ಜಯಾನಂದ ರೈ ಯವರ ನಿವೃತ್ತ ಜೀವನ ಹರ್ಷದಾಯಕ ವಾಗಿರಲಿ ಎಂದರು.ಸಿಬ್ಬಂದಿ ವರ್ಗದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಸಮಾರಂಭದಲ್ಲಿ ಇತರ ಪೋಲೀಸ್ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಉಪಸ್ಥಿತರಿದ್ದರು.

ಸನ್ಮಾನ-ಗೌರವಾರ್ಪಣೆ
ನಿವೃತ್ತರಾದ ಜಯಾನಂದ ರೈ ಪರ್ಪುಂಜ ಮತ್ತು ಅವರ ಪತ್ನಿ ಶಶಿಪ್ರಭ ಜೆ. ರೈ ಅವರನ್ನು ಫಲ ಪುಷ್ಪ ಶಾಲು ಹಾರ ಪೇಟ ತೊಡಿಸಿ ಕಮಾಂಡೆಟ್ ಯು.ಎಂ.ಹೇಮಂತ್ ಕುಮಾರ್ ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಪುತ್ರಿಯರಾದ ಸೃಜನ ಜೆ. ರೈ ಮತ್ತು ಸಂಜನಾ ಜೆ. ರೈ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ಜಯಾನಂದ ರೈ ಮಾತನಾಡಿ 1989ರ ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡೆ ಬಳಿಕ 1991ರಿಂದ ಸುಮಾರು ಒಂಬತ್ತು ವರ್ಷಗಳ ಕಾಲ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ನರಹಂತಕ, ದಂತಚೋರ ವೀರಪ್ಪನ್ ವಿರುದ್ಧ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ದಿನಗಳನ್ನು ನೆನಪಿಸಿಕೊಂಡರು ಬಳಿಕ ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮಂಗಳೂರು 7ನೇ ಮೀಸಲು ಪೊಲೀಸ್ ಘಟಕದಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ (ಎಸ್‌ಐ) ಪದೋನ್ನತಿ ಪಡೆದು ಕಳೆದ ಒಂಬತ್ತು ವರ್ಷಗಳಿಂದ ಮೀಸಲು ಪೊಲೀಸ್ ನಿರೀಕ್ಷಕರಾಗಿ (ಆರ್‌ಎಸ್‌ಐ) ಸೇವೆ ಸಲ್ಲಿಸಿ ಇದೀಗ ಸೇವಾ ನಿವೃತ್ತಿ ಹೊಂದುತ್ತಿದ್ದೇನೆ ಜೊತೆಗೆ ಹೊರ ರಾಜ್ಯಗಳಾದ ಗೋವಾ,ಕೇರಳ,ತಮಿಳುನಾಡಿನಲ್ಲಿ ಚುನಾವಣಾ ಬಂದೊಬಸ್ತಿನಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪ್ರಶಂಸಾ ಪತ್ರವನ್ನು ಪಡೆದಿದ್ದು ಇದು ನನ್ನ ಸೇವೆಗೆ ಸಿಕ್ಕ ಪುರಸ್ಕಾರವಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ ಎಂದರು. ನನ್ನ ಸೇವಾ ಅವಧಿಯಲ್ಲಿ ನನಗೆ ಮಾರ್ಗದರ್ಶನ ನೀಡಿದ ಹಿರಿಯ ಅಧಿಕಾರಿಗಳಿಗೆ ಸಹಕರಿಸಿದ ಸಹೋದ್ಯೋಗಿಗಳಿಗೆ ನನ್ನ ಹೆತ್ತವರಿಗೆ,ಮನೆಯವರಿಗೆ, ಕುಟುಂಬದವರಿಗೆ, ಸ್ನೆಹಿತರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here