







ಪುತ್ತೂರು: ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ಗೆ ಸಂಬಂಧಿಸಿದಂತೆ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಸ್ಐಆರ್ ಸೆಲ್ಫಿ ಕಾರ್ನರ್ನ್ನು ನಿರ್ಮಿಸಲಾಗಿತ್ತು. ಎಸ್ಐಆರ್ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಸೆಲ್ಫಿ ಕಾರ್ನರ್ ವಿದ್ಯಾರ್ಥಿ ಪೋಷಕರ ಹಾಗೂ ನೋಡುಗರ ಗಮನ ಸೆಳೆಯಿತು.



ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಭಾಗವಹಿಸಿದ ಪೋಷಕರು ಸೆಲ್ಫಿ ಕಾರ್ನರ್ನಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಶಾಲಾ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಸದಸ್ಯರು, ಮುಖ್ಯ ಶಿಕ್ಷಕ ಮೋನಪ್ಪ ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 9ನೇ ತರಗತಿಯ ವಿದ್ಯಾರ್ಥಿನಿಯರಾದಕೆ.ವಿ ಲಾಸ್ಯ, ಸಿಂಚನ, ಶಿಫಾಲಿ, ಖುಷಿ, ತನ್ವಿತ, ವಂಶಿಕ, ಚಾರುಣ್ಯ, ಯಕ್ಷಿತಾ, ನವನಿ ಕೇತನ ದೀಪ್ತಿ, ಹರ್ಷಿಣಿ, ಯಶಸ್ವಿನಿ ಮೊದಲಾದವರ ಮುತುವರ್ಜಿಯಿಂದ ಸೆಲ್ಫಿ ಕಾರ್ನರ್ ನಿರ್ಮಿಸಲಾಗಿತ್ತು.













