






ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ 43ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ನಡೆಯುವ ಕ್ರೀಡಾಕೂಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.2ರಂದು ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬಳಿಕ ನಡೆದ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಪ್ರತಿ ಮನೆ ಮನೆಗೆ ತಲುಪಿಸುವ ಬಗ್ಗೆ ಹಾಗೂ ಕಾರ್ಯಕ್ರಮದ ಯಶಸ್ವಿ ಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.



ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ, ಸದಸ್ಯರಾದ ಕೆ. ಸುಂದರ ಪೂಜಾರಿ ಕೆರೆಮಾರು,ಸಂಕಪ್ಪ ಪೂಜಾರಿ ಚಾಕೋಟೆ, ಕೃಷ್ಣಪ್ಪ ನಾಯ್ಕ ಬಾಳೆಕೊಚ್ಚಿ, ಸೌಮ್ಯ ಮುಂಡಕೊಚ್ಚಿ, ಶಾರ್ಮಿಳ ರೈ, ದಿವ್ಯಪ್ರಸಾದ್ ಎ ಎಂ, ಮಣಿಕಂಠ ಕಾವು, ಭಾಸ್ಕರ ಮಾಣಿಯಡ್ಕ,ಐತ್ತಪ್ಪ ಗೌಡ ಪಳನೀರು, ವೆಂಕಪ್ಪ ಮೂಲ್ಯ ಕಾವು, ರವಿ ಕಿರಣ್ ಪಾಟಾಳಿ ಕಾವು, ಮಹೇಶ್ ಗೌಡ ಹೊಸಮನೆ ಉಪಸ್ಥಿತರಿದ್ದರು










