






ಪುತ್ತೂರು: ಕಂಬಳಕೋಡಿ ಭಾಗದ ನಿವಾಸಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಸುಮಾರು 25 ಮನೆಗಳ ನಿವಾಸಿಗಳು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿಸಿದ್ದಾರೆ.ಕಂಬಳಕೋಡಿ ಭಾಗಕ್ಕೆ ರಸ್ತೆ ಮಾಡುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಿವಾಸಿಗಳು ಈ ಮನವಿ ನೀಡಿದ್ದಾರೆ.


ಪ್ರಸ್ತುತ ರಥ ಬೀದಿಯ ಮಧ್ಯದಲ್ಲಿರುವ ರಸ್ತೆ ಸಂಪರ್ಕವು ದೇವಸ್ಥಾನದ ರಕ್ಷಣೆಗೆ ತೊಂದರೆಯಾಗುತ್ತಿದೆ ಎಂಬುದನ್ನು ಮನಗಂಡು ತೋಡಿನ ಬದಿಯಲ್ಲಿ ರಸ್ತೆ ಸಂಪರ್ಕ ಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.ಈಗಾಗಲೇ ನೂತನ ರಸ್ತೆ ಕಾಮಗಾರಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅದನ್ನು ನಿಲ್ಲಿಸಬಾರದೆಂದು ಒತ್ತಾಯಿಸಿದ್ದಾರೆ. ಈ ಭಾಗದಲ್ಲಿ ಹಿರಿಯ ನಾಗರಿಕರು ವಾಸವಾಗಿದ್ದು, ಅನಾರೋಗ್ಯಕ್ಕೀಡಾದ ಸಂದರ್ಭ ಆಂಬುಲೆನ್ಸ್ ಬರಲು ಕೂಡ ರಸ್ತೆ ಇಲ್ಲದಿರುವುದರಿಂದ ನೂತನ ರಸ್ತೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಬೇಕೆಂದು ಪತ್ರದಲ್ಲಿ ಬೇಡಿಕೆ ಸಲ್ಲಿಸಿದ್ದಾರೆ.



ಮನವಿ ಸಲ್ಲಿಸಿದವರಲ್ಲಿ ರಾಜೇಶ್, ನಿವೃತ್ತ ಶಿಕ್ಷಕಿ ವೇದಾವತಿ, ಶಿಕ್ಷಕ ಶ್ರೀಕಾಂತ್, ದಿವಾಕರ ಮಡಿವಾಳ, ಯೋಗೀಶ್, ವಿಶ್ವೇಶ್ವರ, ಗಿರೀಶ್ ಸೇರಿದಂತೆ ಹಲವಾರು ಕಂಬಳಕೋಡಿ ನಿವಾಸಿಗಳು ಉಪಸ್ಥಿತರಿದ್ದರು.










