






ವಿದ್ಯಾರ್ಥಿಗಳಿಗೆ ಅಂಕಗಳೊಂದಿಗೆ ಪೂರಕ ಕೌಶಲ್ಯ ಅತ್ಯಗತ್ಯ : ಡಾ.ಮನಮೋಹನ ಎಂ


ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳು ಮಾತ್ರ ಮುಖ್ಯವಲ್ಲ. ವಿದ್ಯಾಭ್ಯಾಸದ ಜೊತೆಗೆ ಸಂವಹನ ಹಾಗು ಇತರೆ ಕೌಶಲ್ಯಗಳನ್ನು ಕರಗತ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂ ಹೇಳಿದರು.




ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಟ್ರೈನಿಂಗ್ ಆ್ಯಂಡ್ ಪ್ಲೇಸ್ಮೆಂಟ್ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಮುಂಬೈನ ಎಂ.ಆರ್.ಪೈ ಫೌಂಡೇಶನ್ ಮತ್ತು ಫೋರಂ ಆಫ್ ಫ್ರೀ ಎಂಟರ್ಪ್ರೈಸ್ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನದ ನಾಯಕತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಂಬೈನ ಎಂ.ಆರ್.ಪೈ ಫೌಂಡೇಶನ್ ಮತ್ತು ಫೋರಂ ಆಫ್ ಫ್ರೀ ಎಂಟರ್ಪ್ರೈಸ್ನ ಸಂಪನ್ಮೂಲ ವ್ಯಕ್ತಿಗಳಾದ ಮುಂಬೈನ ಎಂಪವರ್ ಗ್ರಾಫ್ನ ಸಂಸ್ಥಾಪಕಿ ಹಾಗೂ ಜೀವನ ಮತ್ತು ಉದ್ಯಮಶೀಲತೆಯ ತರಬೇತುದಾರರಾದ ಕ್ಲಾರಿಸ್ಸಾ ಜಥನ್ನಾ, ಮುಂಬೈನ ಕಾರ್ಪೋರೇಟ್ ವೃತ್ತಿಪರ ತರಬೇತುದಾರರಾದ ಸುಧೀರ್ ಪೈ ಹಾಗೂ ಗಣಕಶಾಸ್ತ್ರ ವಿಭಾಗದ ಉಪನ್ಯಾಸ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿದ್ಯಾ ಎನ್ ವಂದಿಸಿ, ಗಣಕಯಂತ್ರ ವಿಭಾಗದ ಉಪನ್ಯಾಸಕ ಸೂರ್ಯನಾರಾಯಣ ವಂದಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ಎಸ್ ಭಟ್ ನಿರೂಪಿಸಿದರು.










