ಭಾರಿ ಮಳೆಗೆ ನೆಲ್ಲಿತ್ತಿಮಾರು ರಸ್ತೆ ಬದಿ ಕುಸಿತ, ಸಂಪರ್ಕ ಕಡಿತದ ಆತಂಕ

0

ನಿಡ್ಪಳ್ಳಿ: ಆರ್ಲಪದವು-ಪಾಣಾಜೆ ಮುಖ್ಯ ರಸ್ತೆಯಲ್ಲಿ ಪ್ರಸಿದ್ಧ ಜಾಂಬ್ರಿ ಕ್ಷೇತ್ರಕ್ಕೆ ತಿರುಗುವ ನೆಲ್ಲಿತ್ತಿಮಾರು ಎಂಬಲ್ಲಿ ಭಾರಿ ಮಳೆಗೆ ರಸ್ತೆ ಬದಿ ಕುಸಿದು ಬಿದ್ದಿದೆ.ಮತ್ತೆ ಮಳೆ ಸುರಿದರೆ ಕುಸಿದ ಜಾಗದಲ್ಲಿ ಇನ್ನಷ್ಟು ಕುಸಿಯುವ ಪರಿಸ್ಥಿತಿ ಇದ್ದು, ರಸ್ತೆ ಸಂಪೂರ್ಣ ಕಡಿತದ ಭೀತಿ ಎದುರಾಗಿದೆ.ರಸ್ತೆ ಕುಸಿತದಿಂದ ಪ್ರಸಿದ್ಧ ಪುಣ್ಯಕ್ಷೇತ್ರ ಜಾಂಬ್ರಿಗೆ ತೆರಳುವ ರಸ್ತೆ ಸಂಪರ್ಕದ ಜೊತೆಗೆ ಸೂರಂಬೈಲು, ರಣಮಂಗಲ ದೇವಸ್ಥಾನ, ಭರಣ್ಯ ದೇವಸ್ಥಾನ, ಗಿಳಿಯಾಲು, ಕೋಟೆ ಮುಂತಾದ ಸ್ಥಳಗಳಿಗೆ ಮತ್ತು ನೂರಾರು ಮನೆಗಳಿಗೆ ಸಂಪರ್ಕ ಕಡಿತದ ಆತಂಕ ಉಂಟಾಗಿದೆ. ಅಲ್ಲದೆ ಕುಸಿದ ಜಾಗದ ಮೇಲೆ ಮನೆಗಳಿದ್ದು, ಮನೆಯವರು ಆತಂಕದಲ್ಲಿದ್ದಾರೆ.ಸ್ಥಳಕ್ಕೆ ಪಾಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಹಾಗೂ ಗ್ರಾಮಸ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here