







ಪುತ್ತೂರು:- ಬನ್ನೂರು ಕೃಷ್ಣನಗರ ಸಮೀಪದ ಎ.ವಿ.ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.29 ರಂದು ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಇದೇ ಸಂದರ್ಭ ನಿವೃತ್ತ ಗುರು ಮನೋರಮ ಅವರನ್ನು ಗೌರವಿಸಲಾಯಿತು.


ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣ ಕಳುವಾಜೆ ಅವರು ಉದ್ಘಾಟಿಸಿ ಮಾತನಾಡಿ ವೇದವ್ಯಾಸರ ಮಹತ್ ಸಾಧನೆ ಹಾಗೂ ಇತರ ಧಾರ್ಮಿಕ ವ್ಯಕ್ತಿಗಳು ಜನರ ಬದುಕಿಗೆ ನೀಡಿರುವ ತತ್ವ ಸಿದ್ಧಾಂತಗಳ ಕೊಡುಗೆಯನ್ನು ನೆನಪಿಸಿಕೊಂಡು ಶುಭಶಾಯ ಕೋರಿದರು.




ಸಂಸ್ಥೆಯ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಅಧಿಕಾರಿಯಾಗಿರುವ ಗುಡ್ಡಪ್ಪ ಗೌಡ ಬಲ್ಯ ಅವರು ಮಾತನಾಡಿ ವೇದವ್ಯಾಸರ ಮೂಲ ಹೆಸರು ಕೃಷ್ಣದ್ವಪಾಯನ ಹಾಗೂ ಬಾದರಾಯಣ ಎಂಬುದಾಗಿದೆ. ಜ್ಞಾನದ ನಿಧಿಯಾದ ವೇದವನ್ನು ಜನರ ಬದುಕಿಗೆ ಬೇಕಾಗಿ ನಾಲ್ಕು ವಿಭಾಗವನ್ನಾಗಿ ಅವರು ಮಾಡಿರುವುದರಿಂದ ಅವರಿಗೆ ವೇದವ್ಯಾಸರು ಎಂದು ಹೆಸರು ಬಂದಿದೆ.
ಯಾವುದೇ ವ್ಯಕ್ತಿಯು ಎಲ್ಲಿ ಹುಟ್ಟಿದ್ದಾನೆ ಎನ್ನುವುದಕ್ಕಿಂತ, ಏನು ಸಾಧನೆ ಮಾಡಿದ್ದಾನೆ ಮತ್ತು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದಾನೆ ಎಂಬುದರ ಮೇಲೆ ಅವನ ಜೀವನ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕೆ ವೇದವ್ಯಾಸರು ಜ್ವಲಂತ ಸಾಕ್ಷಿ ಹಾಗೂ ನಮಗೆಲ್ಲಾ ಮಾದರಿ ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲರಕ ಎ.ವಿ.ನಾರಾಯಣ, ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ, ನಿರ್ದೇಶಕರಾದ ಗಂಗಾಧರ ಗೌಡ, ವಾಮನಗೌಡ ಹಾಗೂ ಸ್ಥಳೀಯರಾದ ಜನಾರ್ದನ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶ್ರೀವಿಕಾ, ಜ್ಞಾನ, ಅನಿಕಾ, ಲವಿತ್, ವಿಹಾನ್, ಜೋತ್ಸ್ನ ಅವರು “ಗುರುವಿನ ಗುಲಾಮ ನಗುವ ತನಕ” ಎನ್ನುವ ಆಶಯಗೀತೆ ಹಾಡಿದರು. ಮುಖ್ಯೋಪಾಧ್ಯಾಯರಾದ ಅಮರನಾಥ ಪಟ್ಟೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಸುಚಿತಾ ಅವರು ಸ್ವಾಗತಿಸಿ, ನಿಶ್ಮಿತಾ ಅವರು ವಂದಿಸಿದರು. ಶ್ರೀಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು, ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಭೆ ಮುಗಿದ ಬಳಿಕ ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲಾ ಸಂಚಾಲರಕ ಎ.ವಿ.ನಾರಾಯಣ ಅವರ ಗುರು ಮನೋರಮ ಅವರ ಮನೆಗೆ ತೆರಳಿ ಅವರಿಗೆ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳಲಾಯಿತು.










