







ನಿಡ್ಪಳ್ಳಿ; ಭಾರತದ ಗಡಿ ಭದ್ರತಾ ಪಡೆಯಲ್ಲಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಜು.31 ರಂದು ನಿವೃತ್ತಿ ಹೊಂದಿದ ಸುಂದರ ಪೂಜಾರಿ ಪಳಂಬೆ ಇವರಿಗೆ ಭಾರತೀಯ ಜನತಾ ಪಕ್ಷದ ನಿಡ್ಪಳ್ಳಿ ಶಕ್ತಿ ಕೇಂದ್ರದ ವತಿಯಿಂದ ಆ.4 ರಂದು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.


ಮಾಜಿ ಶಾಸಕ ಸಂಜೀವ ಮಠಂದೂರು,ಬಿ.ಜೆ.ಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸುಂದರ ಪೂಜಾರಿಯವರ ದೇಶ ಸೇವೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.



ನೆಟ್ಟಣಿಗೆ ಮುಡ್ನೂರು ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ನಿಡ್ಪಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ ಕುಮಾರ್ ಬೇರಿಕೆ, ಬಿ.ಜೆ.ಪಿ ಬೂತ್ ಅಧ್ಯಕ್ಷ ರೋಹಿತ್ ಪಟ್ಟೆ, ಬೂತ್ ಅಧ್ಯಕ್ಷ ಪ್ರಕಾಶ್ ಬೋರ್ಕರ್ ಕತ್ತಲೆಕಾನ, ಪಾಣಾಜೆ ಸಿ.ಎ ಬ್ಯಾಂಕ್ ನಿರ್ದೇಶಕ ಕುಮಾರ ನರಸಿಂಹ ಬುಳೆನಡ್ಕ,ಬೂತ್ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಗುರಿ, ಬೂತ್ ಕಾರ್ಯದರ್ಶಿ ಶ್ರೀನಿವಾಸ ಹೊಯಿಗೆಗದ್ದೆ, ಕಾರ್ಯಕರ್ತರಾದ ಶಿವಪ್ರಸಾದ್ ರೈ ನುಳಿಯಾಲು, ಹರಿಪ್ರಸಾದ್ ಚೆಲ್ಯರಮೂಲೆ, ಚಂದ್ರಕಲಾ ಆಚಾರ್ಯ ಕೊಪ್ಪಳ, ಅವಿನಾಶ್ ಚೆಲ್ಯರಮೂಲೆ, ಚಂದ್ರಶೇಖರ ಪೂಜಾರಿ ಪಳಂಬೆ ಹಾಗೂ ಸುಂದರ ಪೂಜಾರಿಯವರ ಸಂಬಂಧಿಕರು ಉಪಸ್ಥಿತರಿದ್ದರು.
ಸುಂದರ ಪೂಜಾರಿಯವರ ತಾಯಿ ಕಮಲ,ಪತ್ನಿ ಪಟ್ಟೆ ಶಾಲಾ ಶಿಕ್ಷಕಿ ಭವಿತಾ ಹಾಗೂ ಮಕ್ಕಳು ಹಾಜರಿದ್ದರು. ರಾಜ್ಯ ಬಿ.ಜೆ.ಪಿ ಹಿಂದುಳಿದ ವರ್ಗಗಳ ಯುವ ಮೊರ್ಚಾದ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ ಸ್ವಾಗತಿಸಿದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕತ್ತಲೆಕಾನ ವಂದಿಸಿದರು.










