






ಪುತ್ತೂರು: ಆನೆಗುಂದಿ ಗುರು ಸೇವಾ ಪರಿಷತ್ ಮಹಾಮಂಡಲ ಪುತ್ತೂರು ಇದರ ವತಿಯಿಂದ ಆನೆಗುಂದಿ ಮಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಲಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಯವರನ್ನು ಆ.2ರಂದು ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆಯಲಾಯಿತು.


ಗುರುದೇವಾ ಪರಿಷತ್ ಮೂಲಕ ಇತ್ತೀಚೆಗೆ ಶ್ರೀಗಳಿಗೆ ಸಮರ್ಪಿಸಿದ ರಜತ ಹರಿವಾಣ ಹಾಗೂ ಪಾದುಕೆಯ ಉಳಿಕೆ 502 ಗ್ರಾಂ ಬೆಳ್ಳಿಯನ್ನು ಶ್ರೀ ಗುರುಗಳಿಗೆ ಸಮರ್ಪಿಸಲಾಯಿತು. ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.













