







ಬಡಗನ್ನೂರು: ಭಾರತೀಯ ಗಡಿ ಭದ್ರತಾದಳದಲ್ಲಿ ಸುದೀರ್ಘ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಆ.3ರಂದು ಹುಟ್ಟೂರಿಗೆ ಆಗಮಿಸಿರುವ ಸುಂದರ ಪೂಜಾರಿ ಪಳಂಬೆ(ನಿಡ್ಪಳ್ಳಿ) ಅವರನ್ನು ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ವತಿಯಿಂದ ಸ್ವಾಗತಿಸಲಾಯಿತು.


ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ರವರು ಯೋಧ ಸುಂದರ ಪೂಜಾರಿಯವರಿಗೆ ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ವಿಶ್ವನಾಥ ಗೌಡ ಬೊಳ್ಳಾಡಿ, ಪ್ರೀತಿ ಕುಮಾರಿ ಎಂ.ಪಿ, ಜಯಾಶ್ರೀ ಹೆಚ್, ಭವಿತಾ ಪಿ, ಶ್ರೀ ಕೃಷ್ಣ ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಎನ್, ನಿವೃತ್ತ ದೖೆಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಎಂ ಉಪಸ್ಥಿತರಿದ್ದರು.













