






ಕಡಬ: ವಿಶ್ವಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಇದರ ವತಿಯಿಂದ ವಿ.ಹಿಂ.ಪ. ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಆ.3ರಂದು ನಡೆಯಿತು.


ಹಿರಿಯರಾದ ಅನಂತ ಬೈಪಾಡಿತ್ತಾಯ ಅವರು ದೀಪ ಬೆಳಗಿಸಿ ಆಮಂತ್ರಣ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೃಷ್ಣ ಶೆಟ್ಟಿ ಕಡಬ ಮಾತನಾಡಿ ಶುಭ ಹಾರೈಸಿದರು, ವಿ.ಹಿಂ.ಪ. ಕಡಬ ಪ್ರಖಂಡದ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ವಿ.ಹಿಂ.ಪ.ನಗರ ಅಧ್ಯಕ್ಷ ಕೃಷ್ಣ ಕಾರಂತ ಉಪಸ್ಥಿತರಿದ್ದರು.



ಪ್ರಮುಖರಾದ ಪ್ರಮೋದ್ ನಂದುಗುರಿ, ದಯಾನಂದ ಪ್ರಭು, ಗಿರೀಶ್ ಎ.ಪಿ, ವಿಶ್ವನಾಥ ರೈ ಪೆರ್ಲ, ಸವಿತಾ ಭಟ್ ಪಾಜೋವು, ಸದಾಶಿವ ಭಟ್, ಸತ್ಯನಾರಾಯಣ ಹೆಗ್ಡೆ, ಕಿಶನ್ ಕುಮಾರ್ ರೈ, ವೀಣಾ ರಮೇಶ್ ಕೊಲ್ಲೆಸಾಗು, ಸತೀಶ್ ನಾÊಕ್ ಮೇಲಿನ ಮನೆ,ದೇವಕಿ ಪೂವಲ, ಪುಷ್ಪಾ ಬೇರಿಕೆ, ಗೀತಾ ಅಮೈ ಕೇವಳ, ಸ್ಕಂದಾ ಕಲ್ಲಾಜೆ, ರಕ್ಷಿತ್ ಕೇಪು, ವಿನಯ ಕೋಲ್ಪೆ, ಸಹನಾ ಭಟ್ ಸುಖೇಶ್ ಕುಮಾರ್, ಉಮೇಶ್ ಕೊಣಾಜೆ, ಕೃಷ್ಣ ರೈ ನೆಕ್ಕಿತ್ತಡ್ಕ, ಮಹೇಶ್ ರೈ ಕುಂಟೋಡಿ, ರಂಜಿತ್ ಅಮೈ, ಅರುಣ್ ಕುಮಾರ್ ಪಿಜಕಳ, ಪ್ರೇಮಚಂದ್ರ ಅಜ್ಜರ ಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಕಡಬ ಪ್ರಖಂಡದ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಸ್ವಾಗತಿಸಿ, ವಂದಿಸಿದರು. ಆಮಂತ್ರಣ ಬಿಡುಗಡೆ ಬಳಿಕ ಯಕ್ಷ ಗೆಳೆಯರ ಬಳಗ ಇವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಕೌಶಿಕ ಪ್ರತಿಜ್ಞೆ ನಡೆಯಿತು.










