







ಪುತ್ತೂರು: ನೆಲ್ಲಿಕಟ್ಟೆಯ ಮಡಿವಾಳಕಟ್ಟೆ-ರೈಲ್ವೆಸ್ಟೇಷನ್ ರಸ್ತೆಯಲ್ಲಿನ ಸೇತುವೆಯನ್ನು ಮಾಜಿ ಸೈನಿಕರಾದ ಜ್ಯೋ ಡಿಸೋಜರವರು ಸ್ವಚ್ಚತೆ ಮಾಡಿ ಸಾಮಾಜಿಕ ಕಳಕಳಿ ತೋರಿಸಿದ್ದಾರೆ.


ರೈಲ್ವೇಸ್ಟೇಷನ್ ರಸ್ತೆ ಸಮೀಪ ನಿವಾಸಿಯಾಗಿರುವ ಮಾಜಿ ಸೈನಿಕರೂ ಅಗಿರುವ ಜ್ಯೋ ಡಿಸೋಜರವರು ಕಳೆದ ಹಲವು ವರ್ಷಗಳಿಂದ ಈ ರಸ್ತೆಯಲ್ಲಿನ ಸೇತುವೆಯಲ್ಲಿ ಸ್ವಚ್ಚತಾ ಸೇವೆ ಮಾಡುತ್ತಿದ್ದಾರೆ. ಒಬ್ಬ ಕೂಲಿಯಾಳನ್ನು ನೇಮಿಸಿಕೊಂಡು ಸೇತುವೆ ಮೇಲೆ ತುಂಬಿರುವ ಹೂಳು, ಕಸ, ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಇಲ್ಲಿ ನೀರು ಕಸ ತುಂಬಿ ನೀರು ನಿಂತು ಸಂಚಾರಕ್ಕೆ ಕಷ್ಟವಾಗುತ್ತಿರುವುದನ್ನು ಮನಗಂಡ ಇವರು ತಮ್ಮ ಕೈಯಾರೆ ಕೂಲಿಯಾಳುವಿಗೆ ಸಂಬಳ ನೀಡಿ ಸ್ವಚ್ಚತೆ ಮಾಡಿದ್ದಾರೆ. ಇವರ ಸ್ವಚ್ಚತೆ ಎಲ್ಲರಿಗೂ ಮಾದರಿಯಾಗಲಿ ಎಂದು ಸಾರ್ವಜನಿಕರು ಇವರ ಕೆಲಸವನ್ನು ಶ್ಲಾಘಿಸಿದ್ದಾರೆ.













