







ಕಾಣಿಯೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಸೂರಜ್ 9th (60 kg) ಪ್ರಥಮ, ಶ್ರೇಷ್ಠ ಪಿ ಸಿ 9th (35 kg)ದ್ವಿತೀಯ, ಅಬ್ದು ತವಾಬ್ 8th (50kg) ದ್ವಿತೀಯ, ಪ್ರಾಥಮಿಕ ವಿಭಾಗದಲ್ಲಿ ಕೌಸ್ತುಭ್ 7th ( 65 kg)ದ್ವಿತೀಯ, ಮಸ್ನ ಫಾತಿಮಾ 6th (46 kg) ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.


ವಿಜೇತರನ್ನು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಮತ್ತು ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದರು. ಕರಾಟೆ ಮಾಸ್ಟರ್ ದಿನೇಶ್ ಮುರುಳ್ಯ ತರಬೇತು ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುವರ್ಣ ಕೆ ಬಿ ಮತ್ತು ಶಿಕ್ಷಕಿ ಧನ್ಯ ಎಂ ಕೆ ಸಹಕರಿಸಿದರು.













