ಆ.9: ಸವಣೂರಿನಲ್ಲಿ ಕೆಸರ್ದ ಕಂಡೊಡ್ ಕುಸಲ್ದ ಗೊಬ್ಬು

0

ಪುತ್ತೂರು: ಅಂಬ ಬ್ರದರ್ಸ್ ಸವಣೂರು ಇವರ ಆಶ್ರಯದಲ್ಲಿ ಆ.9 ರಂದು ಬೆಳಿಗ್ಗೆ 9 ರಿಂದ ಸವಣೂರು ಬಸದಿಯ ಬಳಿ, ಹಿರಿಯ ವಕೀಲರಾದ ನೋಟರಿ, ನಿರ್ಮಲ್ ಕುಮಾರ್ ಜೈನ್ ಇವರ ಗದ್ದೆಯಲ್ಲಿ “ಕೆಸರ್ದ ಕಂಡೊಡ್ ಕುಸಲ್ದ ಗೊಬ್ಬು” ಜರಗಲಿದೆ.

ಕ್ರೀಡಾಕೂಟದಲ್ಲಿ ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗೆ 100 ಮೀಟರ್ ಓಟ, 3 ಕಾಲಿನ ಓಟ, ಕಂಬಳ, ರಿಲೇ ಹಾಗೂ ಬಾಟಲಿಗೆ ನೀರು ಹಾಕುವುದು ಮತ್ತು ದಂಪತಿಗಳಿಗೆ ಉಪ್ಪು ಮೂಟೆ ಓಟ ನಡೆಯಲಿದೆ. ಮಧ್ಯಾಹ್ನ ಕೆಸರುಗದ್ದೆಯಲ್ಲಿ ಪುರುಷರ 7 ಜನರ ಮುಕ್ತ ಹಗ್ಗ ಜಗ್ಗಾಟ ನಡೆಯಲಿದ್ದು, ಪ್ರಥಮ ರೂ. 7,777 ಮತ್ತು ಶಾಶ್ವತ ಫಲಕ ಹಾಗೂ ದ್ವಿತೀಯ ರೂ.5,555 ಮತ್ತು ಶಾಶ್ವತ ಫಲಕ ಹೊಂದಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ, ಪ್ರೌಢಶಾಲಾ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದು ಸವಣೂರು ಅಂಬ ಬ್ರದರ್ಸ್‌ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here