







ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರಿನಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮ ಶಾಲೆ, ವೇದಶಂಕರನಗರ, ಉಪ್ಪಿನಂಗಡಿಯ ವಿದ್ಯಾರ್ಥಿ ಯಕ್ಷಿತ್ ಕೆ.ಪಿ ದ್ವಿತೀಯ ಸ್ಥಾನ ಪಡೆದಿದ್ದಾರೆ.


7ನೇ ತರಗತಿಯಲ್ಲಿ ಓದುತ್ತಿರುವ ಯಕ್ಷಿತ್ ಅವರು ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದರು. ಯಕ್ಷಿತ್ ಅವರು ನೀಲಗಿರಿ, ಕೆಮನಬೆಟ್ಟು ನಿವಾಸಿಗಳಾದ ಪ್ರಸಾದ್ ಮತ್ತು ವಿಜಯ ದಂಪತಿಯ ಪುತ್ರ. ಯಕ್ಷಿತ್ ಅವರ ಸಾಧನೆಗೆ ಶ್ರೀರಾಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.













