ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿದ್ಯಾರಶ್ಮಿಯ ವಿದ್ಯಾರ್ಥಿ ಪ್ರಥಮ ಸ್ಥಾನ

0


ಪುತ್ತೂರು: ಶಾಲಾ ಶಿಕ್ಷಣ ವತಿಯಿಂದ ಆಗಸ್ಟ್ 6ರಂದು ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಮನ್‌ದೀಪ್ ಕೆ ಪಿ (ಪ್ರದೀಪ ಕೆ ಮತ್ತು ಸೌಮ್ಯಶ್ರೀ ಕೆ ಇವರ ಪುತ್ರ) 7ನೇ ತರಗತಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.

ಹೈಸ್ಕೂಲ್ ವಿಭಾಗದಲ್ಲಿ 10ನೇ ತರಗತಿಯ ಹೃತೇಶ್ ಬಿ ಎಸ್ (ಶ್ರೀಧರ್ ಪಿ ಎ ಮತ್ತು ರಮ್ಯ ಬಿಎಸ್ ಇವರ ಪುತ್ರ) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕರು ಸವಣೂರು ಸೀತಾರಾಮ ರೈ ಕೆ ಮತ್ತು ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಶಶಿಕಲಾ ಎಸ್ ಆಳ್ವ ಆಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ದಿನೇಶ್ ರವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here