







ಅರಿಯಡ್ಕ: ಅರಿಯಡ್ಕ ಗ್ರಾಮದ ,ಕೌಡಿಚ್ಚಾರು, ಆಕಾಯಿ ನಿವಾಸಿ ರಾಮಣ್ಣ ನಾಯ್ಕ ( 76 ವ)ಆ. 7 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಕೆ.ಎಫ್.ಡಿ.ಸಿ ಯಲ್ಲಿ ಸೂಪರ್ ವೈಸರ್ ಆಗಿ ಸೇವೆ ಸಲ್ಲಿಸಿದ್ದರು.


ಮೃತರು ಧರ್ಮ ಪತ್ನಿ ನಾಟಿ ವೈದ್ಯೆ ಸೀತಮ್ಮ, ಪುತ್ರ ದಿನೇಶ್ ನಾಯ್ಕ, ಪುತ್ರಿ ಪ್ರವೃತ್ತಿ ಮಹಿಳಾ ಸಹಕಾರಿ ಸಂಘ ಅಸೈಗೋಳಿ ಇದರ ಸಿ.ಇ.ಓ ರಾಜೇಶ್ವರಿ ಮತ್ತು ಆಶಾಲತಾ, ಅಳಿಯ ಮಂಗಳೂರು ವಿಶ್ವವಿದ್ಯಾನಿಲಯದ ಸುಪರಿಂಟೆಂಡೆಂಟ್ ಸುಬ್ಬಣ್ಣ ನಾಯ್ಕ, ಮತ್ತು ಮಂಗಳೂರು ಕಮಿಷನರ್ ಆಫೀಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಎಸ್.ಐ ರಮೇಶ್ ನಾಯ್ಕ ಪಂಜ, ನಾಲ್ಕು ಜನ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.













