







ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ಟ್ರಸ್ಟ್ ನಿಡ್ಪಳ್ಳಿ, ಶ್ರೀ ಶಾಂತದುರ್ಗಾ ದೇವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಆಶ್ರಯದಲ್ಲಿ ಸಾಮೂಹಿಕ ತ್ರಿಕಾಲ ಪೂಜೆ ಆ.7 ರಂದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.



ಬೆಳಿಗ್ಗೆ ದೀಪಾರಾಧನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಗಣಪತಿ ಹೋಮ ನಂತರ ಮಧ್ಯಾಹ್ನ ತ್ರಿಕಾಲ ಪೂಜೆ ಮಂಗಳಾರತಿ ನಡೆದು ಕ್ಷೇತ್ರ ಪೂಜೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಅಷ್ಟವಧಾನ ಸೇವೆ,ರಾತ್ರಿ ಮಹಾಪೂಜೆ, ಕ್ಷೇತ್ರ ಪೂಜೆ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.




ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಅಧ್ಯಕ್ಷ ನಾಗೇಶ ಗೌಡ ಹಾಗೂ ಸಮಿತಿಯ ಸದಸ್ಯರು, ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ರೈ ಆನಾಜೆ ಹಾಗೂ ಸದಸ್ಯರು ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.


ತ್ರಿಕಾಲ ಪೂಜೆಯಲ್ಲಿ ನಡೆದ ಅಷ್ಟವಧಾನ ಸೇವೆಗಳು;-ನಾಲ್ಕು ವೇದಗಳು, ಪಾರಾಯಣ, ಪಂಚಾಂಗ ಪಠಣ, ಶಂಖನಾದ, ಸಂಗೀತ, ಯಕ್ಷಗಾನ, ಭಜನೆ, ಭರತನಾಟ್ಯ, ಚೆಂಡೆ ಮೇಳ,ಸ್ಯಾಕ್ಸೋಫೋನ್ ಸೇವೆಗಳು ನಡೆಯಿತು.











